ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮುಖ್ಯ ಶಿಕ್ಷಕರ ಸಮ್ಮೇಳನ ಮುಂದಕ್ಕೆ

Rashmi Kasaragodu
Updated On : 28 Feb 2014, 1:16 am

ಮೈಸೂರು: ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ವತಿಯಿಂದ ಮಾ. 1 ರಂದು ಕುವೆಂಪುನಗರದ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಪ್ರಾಥಮಿಕ ಮುಖ್ಯೋಪಾಧ್ಯಾಯರ ಸಮ್ಮೇಳನವನ್ನು ಲೋಕಸಭಾ ಚುನಾವಣೆ ಘೋಷಣೆಯಾಗುವ ಸಂಭವವಿರುವುದರಿಂದ ಕೇಂದ್ರ ಸಮಿತಿ ಅಧ್ಯಕ್ಷ ಕೆ. ಕೃಷ್ಣಪ್ಪ ನಿರ್ದೇಶನದ ಮೇರೆಗೆ ಮುಂದೂಡಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಡಿ. ಚಂದ್ರಮೋಹನ್ ತಿಳಿಸಿದ್ದಾರೆ.
ಸಂಘಕ್ಕೆ ಮಹೇಶ್, ಅಣ್ಣೇಗೌಡ ಆಯ್ಕೆ
ಜಿಲ್ಲಾ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾಗಿ ಮಹೇಶ್, ಉಪಾಧ್ಯಕ್ಷರಾಗಿ ಕೆ.ಎನ್. ಅಣ್ಣೇಗೌಡ ಅವಿರೋಧ ಆಯ್ಕೆಯಾಗಿದ್ದಾರೆ. ಫೆ. 26 ರಿಂದ ಐದು ವರ್ಷಘಳ ಅವಧಿಗೆ ನಡೆದ ಈ ಚುನಾವಣೆಯಲ್ಲಿ ಮಹೇಶ್ ಮತ್ತು ಕೆ.ಎನ್. ಅಣ್ಣೇಗೌಡರನ್ನು ಅವಿರೋಧವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು ಎಂದು ಕಾರ್ಯದರ್ಶಿ ತಿಳಿಸಿದ್ದಾರೆ.
ರಾಜೀವ್ ಗಾಂಧಿ ಯುವ ಸೇನೆಗೆ ಅರ್ಜಿ
ಅಖಿಲ ಭಾರತ ರಾಜೀವ್ ಗಾಂಧಿ ಯುವ ಸೇನೆಯು ನಗರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿ ಮಾಡಲು ಅರ್ಜಿ ಅಹ್ವಾನಿಸಲಾಗಿದೆ. ನಗರದ 11 ವಾರ್ಡ್‌ಗಳಲ್ಲಿ 33 ಪ್ರಮುಖ ಸ್ಥಾನಗಳು ಖಾಲಿಯಿದ್ದು, ಮಾ.10 ರೊಳಗೆ ಈ ಹುದ್ದೆಗಳಿಗೆ ಭರ್ತಿ ಮಾಡಬೇಕಿದೆ. ಹೀಗಾಗಿ ಸೇನೆಯ ಕಾಯಕರ್ತರು ಅರ್ಜಿ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಅರ್ಜಿ ಸಲ್ಲಿಸುವಂತೆ ರಾಜೀವ್ ಗಾಂಧಿ ಯುವ ಸೇನೆಯ ಮುಖಂಡ ಮೊಹಮ್ಮದ್ನ್‌ಗ್ಮಾನ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು. ಬಡೇಮಕಾನ್, ಉದಯಗಿರಿ, ರಾಜೀವ್‌ನಗರ, ಶಾಂತಿನಗರ, ಕಲ್ಯಾಣಗಿರಿ, ಎನ್.ಆರ್. ಮೊಹಲ್ಲಾ, ಸುಭಾಷ್ ನಗರ, ಬನ್ನಿಮಂಟಪ, ಕೆಸರೆ, ಗೌಸಿಯಾನಗರ, ಸಿದ್ದೀಖಾನಗರದಲ್ಲಿ ವಿವಿಧ ಹುದ್ದೆಗಳು ಖಾಲಿ ಇದೆ ಎಂದರು. ಯುವ ಸೇನೆಯ ಜಿಲ್ಲಾಧ್ಯಕ್ಷ ಸಲೀಂ ಪಾಷ, ಎನ್.ಆರ್. ಕ್ಷೇತ್ರದ ಅಧ್ಯಕ್ಷ ಮೊಹಮ್ಮದ್ ಸಲ್ಮಾನ್, ಮುಖಂಡ ಸಾದಿಕ್ ಖಾನ್ ಇದ್ದರು.
ಪೆಥಾಲಜಿಸ್ಟ್ ಸಂಘದ ಕಾರ್ಯಕ್ರಮ
ನಗರದ ಕಾವೇರಿ ಪೋರ್ಟಿಸ್ ಆಸ್ಪತ್ರೆಯಲ್ಲಿ ಮೈಸೂರು ಪೆಥಾಲಜಿಸ್ಟ್ ಅಸೋಸಿಯೇಷನ್ 2014ರ ಚಟುವಟಿಕೆಗಳನ್ನು ಕಾವೇರಿ ಆಸ್ಪತ್ರೆಯ ಅಧ್ಯಕ್ಷ ಡಾ.ಜಿ.ಆರ್. ಚಂದ್ರಶೇಖರ್ ಹಾಗೂ ಪೆಥಾಲಜಿಸ್ಟ್ ಅಸೋಸಿಯೇಷನ್ ಸಹ ಸಂಸ್ಥಾಪಕ ಡಾ. ಶ್ರೀರಾಂ ಉದ್ಘಾಟಿಸಿದರು. ಡಾ. ಅನಿಲ್ ಕಾಮತ್ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ಕ್ರಮದಲ್ಲಿ ಪೆಥಾಲಜಿಸ್ಟ್‌ಗಳ ಅತ್ಯಮೂಲ್ಯ ಸಹಕಾರದ ಬಗ್ಗೆ ಮಾತನಾಡಿ, ಶಸ್ತ್ರಚಿಕಿತ್ಸಾ ತಜ್‌ಞರ ಮತ್ತು ಪೆಥಾಲಜಿಸ್ಟ್‌ಗಳಲ್ಲಿ ನಡೆಯುವ ಹೆಚ್ಚಿನ ಚರ್ಚೆಗಳು ಕ್ಯಾನ್ಸರ್ ರೋಗವನ್ನು ಗುಣಪಡಿಸುವಲ್ಲಿ ಸಹಕಾರಿಯಾಗುತ್ತದೆ ಹಾಗೂ ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಬೇಕೆಂದು ಹೇಳಿದರು. ಮೈಸೂರು ಪೆಥಾಲಜಿಸ್ಟ್ ಅಸೋಸಿಯೇಷನ್ ಸಂಸ್ಥೆಯ ಡಾ. ದಾಮೋದರ್ ಮತ್ತು ಡಾ. ಕಾಂತರಾಜ್ ಅವರು ಹಿಸ್ಪೋಪೆಥಾಲಜಿ ವಿಷಯಗಳ ಬಗ್ಗೆ ಸ್ಪೈಡ್ ಪ್ರದರ್ಶಿಸಿದರು. ನಂತರ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು. ಸುಮಾರು 75 ಮಂಜಿ ಭಾಗವಹಿಸಿದ್ದರು.
ನಾಳೆಯಿಂದ ವಿಶೇಷ ಚಿಕಿತ್ಸಾ ಶಿಬಿರ
ಸರ್ಕಾರಿ ಆಯುರ್ವೇದ ವೈದ್ಯಾಕೀಯ ಕಾಲೇಜು ಮತ್ತು ಆಸ್ಪತ್ರೆಯ ಕಾಯಚಿಕಿತ್ಸಾ ಹೊರರೋಗಿ ವಿಭಾಗದಲ್ಲಿ ಮಾ. 1 ರಿಂದ 31 ರವರಗೆ ಖಿನ್ನತೆ, ಅಸಹಾಯಕತೆ ಮತ್ತು ಅಸಮರ್ಥತೆಯ ಭಾವನೆ, ಜೀವನದಲ್ಲಿ ನಿರುತ್ಸಾಹ ಹಾಗೂ ಇತರೆ ಮಾನಸಿಕ ತೊಂದರೆಗಳಿಗೆ ಸಂಬಂಧಿಸಿದಂತೆ ಉಚಿತ ತಪಾಸಣೆ ಹಾಗೂ ವಿಶೇಷ ಚಿಕಿತ್ಸಾ ಶಿನಿರ ಆಯೋಜಿಸಿದೆ. ಹೆಚ್ಚಿನ ಮಾಹಿತಿಗೆ ಡಾ.ಎನ್. ಆಶಾವತಿ, ದ್ವಿತೀಯ ಸ್ನಾತಕೋತ್ತರ ವಿದ್ಯಾರ್ಥಿನಿ ಅಥವಾ ಕಚೇರಿ ದೂ. 0821- 2443701 ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement