ರಸ್ತೆ, ಸೇತುವೆ ಕಾಮಗಾರಿಗೆ 25 ಕೋಟಿ
ಕ.ಪ್ರ. ವಾರ್ತೆ, ಹುಣಸೂರು, ಫೆ. 27
ಹುಣಸೂರು ತಾಲೂಕಿನ ವಿವಿದೆಡೆ ಜಿಲ್ಲಾ ಮುಖ್ಯರಸ್ತೆಗಳ ಸುಧಾರಣೆ ಯೋಜನೆಯಡಿ 25 ಕೋಟಿ ರು. ವೆಚ್ಚದಲ್ಲಿ ರಸ್ತೆ, ಸೇತುವೆ ಕಾಮಗಾರಿ ಮಂಜೂರಾಗಿದ್ದು, ಈ ಎಲ್ಲ ಕಾಮಗಾರಿಗಳಿಗೆ ಫೆ. 28ರಂದು ಗುದ್ದಲಿಪೂಜೆ ನೆರವೇರಿಸಲಾಗುವುದು ಎಂದು ಶಾಸಕ ಎಚ್.ಪಿ. ಮಂಜುನಾಥ್ ಹೇಳಿದರು.
ಬೆಳಿಗ್ಗೆ 9ಕ್ಕೆ ಬೀರತಮ್ಮನಹಳ್ಳಿಯಲ್ಲಿ 90 ಲಕ್ಷ ರು. ವೆಚ್ಚದ ಹನಗೋಡು-ಪಂಚವಳ್ಳಿ ರಸ್ತೆಯ ಬೀರತಮ್ಮನ ಹಳ್ಳಿಯಿಂದ ಪಂಚವಳ್ಳಿವರೆಗಿನ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಂತರ ಹುಣಸೂರು-ಹನಗೋಡು ರಸ್ತೆಯ ಹೊನ್ನೇನಹಳ್ಳಿ ಬಳಿ ಕೂಡಲೂರು ಗೇಟ್ನಿಂದ ರಸ್ತೆ ಅಗಲೀಕರಣ, ಡಾಂಬರೀಕರಣ ಕಾಮಗಾರಿ, ಕೋಟಿ ವೆಚ್ಚ ದಡಿ ಸೀರೇನಹಳ್ಳಿ ಬಳಿ ಗಾವಡಗೆರೆ ರಸ್ತೆಯ ಹಳ್ಳಕ್ಕೆ ಸೇತುವೆ ನಿರ್ಮಾಣ, ಕಟ್ಟೆಮಳಲವಾಡಿ-ಮಾಕೋಡು-ರಾವಂದೂರು ರಸ್ತೆ ಅಭಿವೃದ್ದಿ ಹಾಗೂ ತಾಲೂಕಿನ ಹಲವು ಕಡೆ ಗುದ್ದಲಿಪೂಜೆ ನೆರವೇರಿಸಲಾಗುವುದು ಎಂದು ಹೇಳಿದರು.