ವಿಶೇಷ ಪರೀಕ್ಷಾ ಸಿದ್ಧತಾ ಮಾಹಿತಿ
ಮೈಸೂರು: ಸಾರ್ವಜನಿಕ ಶಿಕ್ಷಣ ಇಲಾಖೆಯು ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಮಾ. 3 ರಿಂದ 21 ರವರೆಗೆ ಮಧ್ಯಾಹ್ನ 2.35 ರಿಂದ 3.05 ರವರಗೆ ವಿಶೇಷ ಪರೀಕ್ಷಾ ಸಿದ್ಧತಾ ಮಾಹಿತಿಯನ್ನು ಆಕಾಶವಾಣಿ ಮೂಲಕ ಪ್ರಸಾರ ಮಾಡಲಾಗುವುದು. ಮಾ. 3 ರಂದು ಕನ್ನಡ ಪ್ರಥಮ ಭಾಷೆ, 4 ರಂದು ದ್ವಿತೀಯ ಭಾಷೆ ಇಂಗ್ಲಿಷ್, 5 ರಂದು ಗಣಿತ ಭಾಗ- 1, 6 ರಂದು ಗಣಿತ ಭಾಗ-2, 7 ರಂದು ವಿಜ್ಞಾನ ಭಾಗ-1, 10 ರಂದು ವಿಜ್ಞಾನ ಭಾಗ-2, 11 ರಂದು ಸಮಾಜ ವಿಜ್ಞಾನ ಭಾಗ-1, 12 ರಂದು ಸಮಾಜ ವಿಜ್ಞಾನ ಭಾಗ-2, 13 ರಂದು ಹಿಂದಿ ತೃತೀಯ ಭಾಷೆ, 14 ರಂದು ಸಂಸ್ಕೃತ ಪ್ರಥಮ ಭಾಷೆ, 17 ರಂದು ಪ್ರಥಮ ಭಾಷೆ ಇಂಗ್ಲಿಷ್, 18 ರಂದು ಕನ್ನಡ ದ್ವಿತೀಯ ತೃತೀಯ ಭಾಷೆ, 19 ರಂದು ಎಸ್ಸೆಸ್ಸೆಲ್ಸಿ ಮಂಡಳಿ ನಿರ್ದೇಶಕರ ಸಂದರ್ಶನ 20 ರಂದು ಬರವಣಿಗೆ ಕೌಶಲ್ಯ ಹಾಗೂ 21 ರಂದು ಆರೋಗ್ಯ ಮತ್ತು ಮಾನಸಿಕ ಸ್ಥಿತಿ ವಿಷಯಗಳು ಪ್ರಸಾರವಾಗಲಿದೆ. ಮುಖ್ಯ ಶಿಕ್ಷಕರು ಈ ಅವಧಿಯಲ್ಲಿ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ಪ್ರಸಾರ ಮಾಡುವಂತೆ ಡಿಡಿಪಿಐ ಎಚ್.ಆರ್. ಬಸಪ್ಪ ತಿಳಿಸಿದ್ದಾರೆ.