ನಾಳೆಯಿಂದ ಹನಸೋಗೆ ಜಾತ್ರೆ
ಕೆ.ಆರ್. ನಗರ: ತಾಲೂಕಿನ ಹನಸೋಗೆ ಗ್ರಾಮದಲ್ಲಿ ಶ್ರೀನಿವಾಸ ದೇವರ ಬ್ರಹ್ಮ ರಥೋತ್ಸವದ ಅಂಗವಾಗಿ ಮಾ. 2 ರಿಂದ 9 ರವರೆಗೆ ರಾಸುಗಳ ಜಾತ್ರೆ ನಡೆಯಲಿದ್ದು, ಮಾ. 6 ರಂದು ಗುರುವಾರ ದೇವಾಲಯದ ಆವರಣದಲ್ಲಿ ರಥೋತ್ಸವ ನಡೆಯಲಿದೆ. ಜಾತ್ರೆಯಲ್ಲಿ ಪಾಲ್ಗೊಳ್ಳುವ ಉತ್ತಮ ರಾಸುಗಳಿಗೆ ಪ್ರಥಮ, ದ್ವೀತಿಯ ಮತ್ತು ತೃತಿಯ ಬಹುಮಾನ ನೀಡಲಾಗುತ್ತದೆ ಜತೆಗೆ ಜಾತ್ರಾ ಮೈದಾನದಲ್ಲಿ ಅಂಗಡಿ, ಸಿಹಿತಿಂಡಿ ಅಂಗಡಿ ತೆರೆಯಲು ಅವಕಾಶವಿದೆ ಎಂದು ಧನಗಳ ಜಾತ್ರಾ ಸಮಿತಿ ತಿಳಿಸಿದೆ.
ಗಾಂಜಾ ಬೆಳೆದಿದ್ದ ರೈತನ ಬಂಧನ
ಬೈಲುಕುಪ್ಪೆ: ಗಾಂಜಾ ಬೆಳೆ ಬೆಳೆದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಸಮೀಪದ ಚಿಕ್ಕಹೊಸೂರು ಗ್ರಾಮದಲ್ಲಿ ನಡೆದಿದೆ.ಗ್ರಾಮದ ಲೇಟ್ ನಿಂಗಯ್ಯ ಅವರ ಪುತ್ರ ರಾಜಯ್ಯ(46) ಬಂಧಿತ ಆರೋಪಿ. ಬುಧವಾರ ಸಂಜೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ರಾಜಯ್ಯನ ಜಮೀನಿನಲ್ಲಿ ಬೆಳೆದಿದ್ದ 2 ಕೆ.ಜಿ. 250 ಗ್ರಾಂ. ಗಾಂಜಾವನ್ನು ವಶಪಡಿಸಿಕೊಂಡು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.