ಮಾಸ್ಟರ್ಸ್ ಅಥ್ಲೆಟಿಕ್ಸ್- ನಾಲ್ಕು ಚಿನ್ನದ ಪದಕ
ಮೈಸೂರು: ಕೊಯಮತ್ತೂರಿನಲ್ಲಿ ನಡೆದ 36ನೇ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದ ಮೈಸೂರು ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಸಂಸ್ಥೆಯ ನಾಲ್ವರು ಚಿನ್ನದ ಪದಕ ಪಡೆದಿದ್ದಾರೆ.
80 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಎನ್.ಆರ್. ಶಂಕರ್‌ರಾಜ್ ಅವರು 5 ಕಿ.ಮೀ. ನಡಿಗೆಯಲ್ಲಿ ಚಿನ್ನ, 65 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಸಿ.ಬಿ. ಚೆಲುವೇಗೌಡ ಶಾಟ್‌ಪುಟ್‌ನಲ್ಲಿ ಚಿನ್ನ, 60 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಎಚ್.ಆರ್. ರಾಮಸ್ವಾಮಿ ಚೆಸ್‌ನಲ್ಲಿ ಚಿನ್ನದ ಪದಕ ಮತ್ತು 50 ವರ್ಷದವರ ವಿಭಾಗದಲ್ಲಿ ಎಚ್.ಡಿ. ಪುಟ್ಟಣ್ಣಚಾರಿ ಅವರು 4್ಢ100 ಓಟದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಅಂತೆಯೆ ಸುಬ್ಬಶೆಟ್ಟಿ ಅವರು 5 ಕಿ.ಮೀ. ನಡಿಗೆಯಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. 55 ವರ್ಷ ಮೇಲ್ಪಟ್ಟ ಮಹಿಳೆಯರ ವಿಭಾಗದ 5 ಕಿ.ಮೀ. ನಡಿಗೆಯಲ್ಲಿ ಬಿ.ಸಿ. ಪಾರ್ವತಿ ಪ್ರಥಮ, 35 ವರ್ಷ ಮೇಲ್ಪಟ್ಟವರ ಜಾವಲಿನ್ ಎಸೆತದಲ್ಲಿ ಬಿ.ಎಸ್. ಜಯಶ್ರೀ ಅವರು ಬೆಳ್ಳಿ ಪದಕ ತಮ್ಮದಾಗಿಸಿ ಕೊಂಡಿದ್ದಾರೆ.