ರಂಗ ನಮನ ಕಾರ್ಯಕ್ರಮ
ಮೈಸೂರು: ಸಿ.ಆರ್. ಸಿಂಹ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ರಂಗಾಯಣ ಹಾಗೂ ಹವ್ಯಾಸಿ ಕಲಾವಿದರು ಮಾ.1 ರಂದು ಸಂಜೆ 6ಕ್ಕೆ ರಂಗಾಯಣದಲ್ಲಿ ರಂಗನಮನ ಕಾರ್ಯಕ್ರಮ ಏರ್ಪಡಿಸಿದ್ದಾರೆ ಎಂದು ನಿರ್ದೇಶಕ ಎಚ್. ಜನಾರ್ದನ್ ತಿಳಿಸಿದ್ದಾರೆ.
ಪ್ರಸಾದ್ ಸಂತಾಪ
ಹಿರಿಯ ಚಲನಚಿತ್ರ ನಟ ಸಿ.ಆರ್. ಸಿಂಹ ಅವರ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಸಂತಾಪ ಸೂಚಿಸಿದ್ದಾರೆ. ರಂಗಭೂಮಿ ಹಾಗೂ ಕನ್ನಡ ಚಿತ್ರರಂಗಕ್ಕೆ ಇವರ ಸೇವೆ ಅಪಾರವಾದದು. ಇವರು ನಟಿಸಿದ ಚಿತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿ ಹಚ್ಚಹಸಿರಾಗಿ ಉಳಿದಿದೆ. ಇವರ ವ್ಯಕ್ತಿತ್ವ ಹಾಗೂ ನಟನೆ ಕಿರಿಯ ಕಲಾವಿದರಿಗೆ ದಾರಿ ದೀಪವಾಗಿದೆ. ಇವರ ನಿಧನದಿಂದ ರಂಗಭೂಮಿ ಹಾಗೂ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಬೇಸಿಗೆ ಶಿಬಿರ
ದಿ ಕಾಸ್ಮೋಪಾಲಿಟನ್ ಕ್ಲಬ್‌ನಲ್ಲಿ ಮಾರ್ಚ್‌ನಿಂದ ಮೇ ವರೆಗೆ ಈಜು ಬೇಸಿಗೆ ಶಿಬಿರ ಆಯೋಜಿಸಿದೆ. ಮಾ. 2 ರ ಬೆಳಗ್ಗೆ 10.30ಕ್ಕೆ ಕ್ಲಬ್‌ನ ಆವರಣದಲ್ಲಿ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಉದ್ಘಾಟಿಸುವರು. ಬೆಳಗ್ಗೆ ಮತ್ತು ಸಂಜೆ ಕ್ಲಬ್ ಸದಸ್ಯರು, ಕುಟಂಬದವರು, ಸದಸ್ಯ ಮಕ್ಕಳು ಮತ್ತು ಸಾರ್ವಜನಿಕರಿಗೆ ಭಾಗವಹಿಸಬಹುದು. ಹೆಚ್ಚಿನ ವಿವರಗಳಿಗೆ ಜಗದೀಶ್, ಕ್ಲಬ್‌ನ ಸ್ವಿಮಿಂಗ್ ಕೋಚ್, ಮೊ. 9845974888, ದೂ. 2423881 ಸಂಪರ್ಕಿಸಬಹುದು.
ಗಾಲ್ಫ್ ಪಂದ್ಯಾವಳಿ
ಜಯಚಾಮರಾಜ ಒಡೆಯರ್ ಗಾಲ್ಫ್ ಕ್ಲಬ್ ಮತ್ತು ಮೈಸೂರು ರೌಂಡ್ ಟೇಬಲ್ 21, ಐಡಿಬಿಐ ಬ್ಯಾಂಕ್ ಆಯೋಜಿಸಿರುವ 7ನೇ ವಾರ್ಷಿಕ ಚಾರಿಟಿ ಗಾಲ್ಫ್ ಪಂದ್ಯಾವಳಿ ರೌಂಡ್ ಟೇಬರ್ ಇಂಡಿಯಾ ಒಪನ್-2014 ಮಾ. 2ರಂದು ಗಾಲ್ಫ್ ಕ್ಲಬ್‌ನಲ್ಲಿ ನಡೆಯಲಿದೆ.
ಕ್ರ್ಯಾಷ್ ಕೋರ್ಸ್
ನವೋದಯ ಫೌಂಡೇಶನ್ ವತಿಯಿಂದ ಪಿಯುಸಿಇಟಿ-ಕ್ರ್ಯಾಷ್ ಕೋರ್ಸ್‌ಗೆ 30 ದಿನಗಳ ತರಬೇತಿ ಆಯೋಜಿಸಿದೆ. ಆಸಕ್ತರು ಮಾ. 2ರೊಳಗೆ ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 8 ರವರೆಗೆ ಹೆಸರನ್ನು ನೋಂದಾಯಿಸಿಕೊಳ್ಳಲು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ. 9611012411 ಸಂಪರ್ಕಿಸಬಹುದು.
ಉಚಿತ ಕಾರ್ಯಾಗಾರ
ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ಮಾ. 2ರ ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ನೇತಾಜಿ ಎಜುಕೇಷನ್ ಫೌಂಡೇಶನ್ ವತಿಯಿಂದ ಒಂದು ದಿನದ ಉಚಿತ ಕಾರ್ಯಾಗಾರ ಹಮ್ಮಿಕೊಂಡಿದೆ. ಆಸಕ್ತರು ತಮ್ಮ ಹೆಸರನ್ನು ಬೆಳಗ್ಗೆ 10.30 ರಿಂದ ರಾತ್ರಿ 8.30ರವರೆಗೆ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಮೊ. 9980639953 ಸಂಪರ್ಕಿಸಬಹುದು.
ಯೋಗ ಶಿಕ್ಷಣ
ರಾಮಕೃಷ್ಣನಗರದ ಪಾತಂಜಲ ಯೋಗಶಿಕ್ಷಣ ಕೇಂದ್ರದ ವತಿಯಿಂದ ಮಾ. 2ರ ಬೆಳಗ್ಗೆ 6ಕ್ಕೆ ಆರು ತಿಂಗಳ ಯೋಗ ಶಿಕ್ಷಣ ತರಗತಿಗಳ 85ನೇ ತಂಡದ ಸಮಾರೋಪ ಸಮಾರಂಭ ಹಾಗೂ 86ನೇ ತಂಡದ ಉದ್ಘಾಟನಾ ಸಮಾರಂಭವು ನಡೆಯಲಿದೆ.
ಉಚಿತ ತರಬೇತಿ
ಮೈಸೂರು ಸ್ಕೂಲ್ ಆಫ್ ಬ್ಯಾಂಕಿಂಗ್ ವತಿಯಿಂದ ಸ್ಟಾಫ್ ಸೆಲೆಕ್ಷನ್ ಕಮಿಷನ್ ಮತ್ತು ಐಬಿಪಿಎಸ್ ಪರೀಕ್ಷೆಗಳಿಗೆ 30 ದಿನಗಳ ಉಚಿತ ತರಬೇತಿ ಆಯೋಜಿಸಿದೆ. ಆಸಕ್ತರು ಮಾ. 2 ರೊಳಗೆ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಮಾಹಿತಿಗಾಗಿ ಮೊ.8123183649 ಸಂಪರ್ಕಿಸಬಹುದು.
ತಪಾಸಣೆ ಶಿಬಿರ
ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಕಚೇರಿಯಲ್ಲಿ ಮಾ. 2ರ ಬೆಳಗ್ಗೆ 10ಕ್ಕೆ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಿದ್ದು, ಮೊ 91411 19651 ಸಂಪರ್ಕಿಸಬಹುದು.