ರು. 3 ಕೋಟಿ ರು. ವೆಚ್ಚದ ಕಾಮಗಾರಿಗಳಿಗೆ ಚಾಲನೆ
ಮೈಸೂರು: ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಸಕ ವಾಸು ಅವರು ಶುಕ್ರವಾರ ಸುಮಾರು ರು. 3 ಕೋಟಿ ವೆಚ್ಚದ ವಿವಿಧ ಕಾಮಗಾರಿಗೆ ಚಾಲನೆ ನೀಡಿದರು.
ಜಯಲಕ್ಷ್ಮೀಪುರಂ ರಾಘವೇಂದ್ರ ಮಠದ ರಸ್ತೆ ಡಾಂಬರೀಕರಣಕ್ಕೆ ರು. 20 ಲಕ್ಷ, ಕಾಳಿದಾಸ ರಸ್ತೆಯಿಂದ ವರ್ತುಲ ರಸ್ತೆ ಸಂಪರ್ಕಿಸುವ ರಸ್ತೆ ಕಾಮಗಾರಿಗೆ ರು. 1.17 ಕೋಟಿ, ಪಡುವಾರಹಳ್ಳಿ ಸಮೀಪದ ನೀಲಗಿರೀಸ್ನಿಂದ ಬೋಗಾದಿ ರಸ್ತೆ ಸಂಪರ್ಕಿಸುವ ರಸ್ತೆ ಕಾಮಗಾರಿಗೆ ರು. 1.70 ಕೋಟಿ ಮತ್ತು ಗಂಗೋತ್ರಿ ಬಡಾವಣೆಯಲ್ಲಿ ರು. 25 ಲಕ್ಷ ವೆಚ್ಚದ ಕಾಮಗಾರಿಗೆ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿದರು.
ಬಳಿಕ ವಾರ್ಡ್ ನಂ. 36ರಲ್ಲಿ ರು. 65 ಲಕ್ಷ ವೆಚ್ಚದಲ್ಲಿ ದೇವರಾಜ ಅರಸು ರಸ್ತೆ ಮತ್ತು ಸಂತೆಪೇಟೆ ಸಂಪರ್ಕಿಸುವ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಚಾಲನೆ ನೀಡಿದರು.
ಸಂಸದ ಎಚ್. ವಿಶ್ವನಾಥ್, ಮೇಯರ್ ಎನ್.ಎಂ. ರಾಜೇಶ್ವರಿ, ಪಾಲಿಕೆ ಸದಸ್ಯರಾದ ಡಿ. ನಾಗಭೂಷಣ್, ಪಿ. ಪ್ರಶಾಂತ್ಗೌಡ, ಭಾಗ್ಯವತಿ, ಮಹದೇವಪ್ಪ, ಪಾಲಿಕೆ ಆಯುಕ್ತ ಪಿ.ಜಿ. ರಮೇಶ್, ಆರ್. ರಘು, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ. ಬಸವೇಗೌಡ ಮೊದಲಾದವರು ಇದ್ದರು.