ವಸತಿ ನಿಲಯದ ಯುವತಿ ನಾಪತ್ತೆ
ಮೈಸೂರು: ಮಹಿಳಾ ಕೌಟುಂಬಿಕ ವಸತಿ ನಿಲಯದಲ್ಲಿದ್ದ ಯುವತಿ ನಾಪತ್ತೆಯಾಗಿದ್ದಾರೆ. ಹೊಳೆನರಸೀಪುರದ ಪುಷ್ಪಾ (19) ನಾಪತ್ತೆಯಾದವರು. ಬಟ್ಟೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಪುಷ್ಪಾ ವಿವಾಹಿತ ಮಂಜು ಎಂಬುವರನ್ನು ಪ್ರೀತಿಸುತ್ತಿದ್ದರು. ಈ ವಿಷಯ ತಿಳಿದ ಪುಷ್ಪಾ ಪೋಷಕರು ಆಕೆಯನ್ನು ತಮ್ಮೊಡನೆ ಕರೆದುಕೊಂಡು ಹೋಗುವುದಿಲ್ಲ ಎಂದು ತಿಳಿಸಿದ್ದರು. ಕೌಟುಂಬಿಕ ಸಲಹೆ ಪಡೆಯಲು ಆಗಮಿಸಿದ್ದ ಪುಷ್ಪಾ ಫೆ. 22ರ ಸಂಜೆ ಯಾರಿಗೂ ಹೇಳದೆ ಹಾಸ್ಟೆಲ್ನಿಂದ ಹೋಗಿದ್ದಾರೆ. ಈ ಸಂಬಂಧ ಅಖಿಲ ಭಾರತ ಮಹಿಳಾ ಕೌಟುಂಬಿಕ ವಸತಿ ನಿಲಯದ ವಾರ್ಡನ್ ಪದ್ಮಶ್ರೀ ಪೊಲೀಸರಿಗೆ ದೂರು ನೀಡಿದ್ದಾರೆ. ಕೋಲುಮುಖ, ಸಾಧಾರಣ ಮೈಕಟ್ಟು, ಕನ್ನಡ ಮಾತನಾಡುತ್ತಾರೆ. ಸುಳಿವು ಲಭ್ಯವಾದಲ್ಲಿ ಅಶೋಕಪುರಂ ಪೊಲೀಸ್ ಠಾಣೆ ದೂ. 0821- 2418321, 2418521 ಸಂಪರ್ಕಿಸಿ.