'ಸುಗಮ ಸಂಗೀತದಿಂದ ಮಾನಸಿಕ ನೆಮ್ಮದಿ'
ಮೈಸೂರು: ಒತ್ತಡ, ಜಂಜಾಟ ಬದುಕಿನಲ್ಲಿ ಉಂಟಾಗುವ ಏರಿಳಿತಗಳನ್ನು ಹೋಗಲಾಡಿಸಿ ಸುಗಮ ಸಂಗೀತ ಮಾನಸಿಕ ನೆಮ್ಮದಿ ನೀಡುತ್ತದೆ ಎಂದು ಪತ್ರಕರ್ತ ರಂಗನಾಥ್ ಮೈಸೂರು ಹೇಳಿದರು.
ಹಂಸಧ್ವನಿ ಸಾಂಸ್ಕೃತಿಕ ಟ್ರಸ್ಟ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಏರ್ಪಡಿಸಿದ್ದ ಸುಗಮ ಸಂಗೀತ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕವಿಯ ಕವಿತೆಗೆ ಜನಪ್ರೀಯತೆ ದೊರಕಿಸಿಕೊಟ್ಟು ಕವಿ ಮತ್ತು ಸಹೃದಯ ನಡುವಣ ಸೇತುವೆಯಾಗುವ ನಿಟ್ಟಿನಲ್ಲಿ ಸುಗಮ ಸಂಗೀತಗಾರರ ಪಾತ್ರ ಮಹತ್ವದ್ದಾಗಿದೆ ಎಂದರು. ಹಿರಿಯ ಸುಗಮ ಸಂಗೀತ ಗಾಯಕ ಪ್ರೊ.ಎಸ್. ಮಲ್ಲಣ್ಣ, ಸಂಘದ ಅಧ್ಯಕ್ಷೆ ಹೇಮಾ, ಸಂಸ್ಥೆಯ ಕಾರ್ಯದರ್ಶಿ ಪ್ರೊ.ಕೆ.ಆರ್. ಪ್ರೇಮಲೀಲಾ ಇದ್ದರು. ಭಾಗ್ಯ ಪ್ರಾರ್ಥಿಸಿದರು. ಸುಜಾತಾ ಅಮೃತೇಶ್ ನಿರೂಪಿಸಿದರು.