ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅರ್ಬನ್ ಹಾತ್ ಕರಕುಶಲ ಮೇಳ

Mainashree
Updated On : 3 Jan 2014, 11:15 am

ಮೈಸೂರು: ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿನ ಜೆಎಸ್‌ಎಸ್ ಮೈಸೂರು ಅರ್ಬನ್ ಹಾತ್‌ನಲ್ಲಿ ಕರಕುಶಲ ಮೇಳ ಶುಕ್ರವಾರ ಆರಂಭವಾಯಿತು.
ಜವಳಿ ಮಂತ್ರಾಲಯದ ಕರಕುಶಲ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿರುವ ಈ ಮೇಳವನ್ನು ವಿಧಾನ ಪರಿಷತ್ ಸದಸ್ಯ ಆರ್. ಧರ್ಮಸೇನ ಉದ್ಘಾಟಿಸಿದರು.
ಕರಕುಶಲ ಇಲಾಖೆ ಉಪನಿರ್ದೇಶಕ ಜನಾರ್ದನ್, ಸಹಾಯಕ ನಿರ್ದೇಶಕ ಪರಪ್ಪ, ಅಭಿವೃದ್ಧಿ ಅಧಿಕಾರಿ ಕೃಷ್ಣಮೂರ್ತಿ, ಜೆಎಸ್‌ಎಸ್ ತಾಂತ್ರಿಕ ಶಿಕ್ಷಣ ವಿಭಾಗದ ಜಂಟಿ ನಿರ್ದೇಶಕ ಬಿ.ಆರ್ ಉಮಾಕಾಂತ್, ಜೆಎಸ್‌ಎಸ್ ಅರ್ಬನ್ ಹಾತ್ ಯೋಜನಾಧಿಕಾರಿ ಶಿವನಂಜಸ್ವಾಮಿ ಇದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಯೋಜನಾಧಿಕಾರಿ ಶಿವನಂಜಸ್ವಾಮಿ, ಕುಶಲ ಕರ್ಮಿಗಳು ನೇರವಾಗಿ ಗ್ರಾಹಕರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದರಿಂದ ಕೈಗೆಟಕುವ ದರದಲ್ಲಿ ವಸ್ತುಗಳು ಲಭ್ಯವಿದೆ. ವಿಶೇಷವಾಗಿ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಪಡೆದ ಕುಶಲ ಕರ್ಮಿಗಳಿಗೆ ಪ್ರೋತ್ಸಾಹಿಸಲು ಈ ಮೇಳ ಆಯೋಜಿಸಲಾಗಿದೆ ಎಂದರು.
ಮೇಳದಲ್ಲಿ ಕೈಮಗ್ಗ ಸೀರೆಗಳು, ಸಿದ್ಧ ಉಡುಪುಗಳು, ರೇಷ್ಮೆ ಸೀರೆ ಮತ್ತು ಶಾಲುಗಳು, ಚರ್ಮದ ಬ್ಯಾಗುಗಳು, ಪಾದರಕ್ಷೆಗಳು, ಮರದ ಕೆತ್ತನೆ ವಸ್ತುಗಳು, ಗೃಹೋಪಯೋಗಿ ಅಲಂಕಾರಿಕ ಸಾಮಗ್ರಿಗಳು, ಮಣ್ಣಿನ ಕಲಾತ್ಮಕ ಪದಾರ್ಥಗಳು, ಕೃತಕ ಅಭರಣಗಳು ಈ ಮುಂತಾದ ವೈವಿಧ್ಯಮಯ ವಸ್ತುಗಳನ್ನು ಪ್ರದರ್ಶಿಸಲಾಗಿದೆ. ಸುಮಾರು 100ಕ್ಕೂ ಅಧಿಕ ಮಳಿಗೆಗಳನ್ನು ತೆರೆಯಲಾಗಿದ್ದು, ಜ.12 ರವರೆಗೆ ಪ್ರತಿದಿನ ಬೆಳಗ್ಗೆ 10 ರಿಂದ ರಾತ್ರಿ 9 ರವರೆಗೆ ಪ್ರದರ್ಶನ ಮುಕ್ತ. ವಾರಾಂತ್ಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement