ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕ್ರೀಡಾಶಾಲೆ, ನಿಲಯಗಳಿಗೆ ಕ್ರೀಡಾಪಟುಗಳ ಆಯ್ಕೆ

Mainashree
Updated On : 3 Jan 2014, 11:15 am

ಮೈಸೂರು: ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಡೆಸುತ್ತಿರುವ ಕ್ರೀಡಾಶಾಲೆ ಮತ್ತು ಕ್ರೀಡಾ ನಿಲಯಗಳಿಗೆ ಹಿರಿಯರ ವಿಭಾಗದಲ್ಲಿ ಯುವಕ, ಯುವತಿಯರು ಮತ್ತು ಜಿಲ್ಲಾ ಕ್ರೀಡಾಶಾಲೆಗೆ ಕಿರಿಯರ ವಿಭಾಗದಲ್ಲಿ ಬಾಲಕ, ಬಾಲಕಿಯರನ್ನು ಪ್ರಥಮ ಹಂತದ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿದೆ.
ಕ್ರೀಡಾಶಾಲೆಗೆ 2014ರ ಜ.1ಕ್ಕೆ 10 ವರ್ಷದೊಳಗಿನ ಪ್ರತಿಭಾನ್ವಿತ ಬಾಲಕ, ಬಾಲಕಿಯರನ್ನು ಅಥ್ಲೆಟಿಕ್ ಮತ್ತು ಜಿಮ್ನಾಸ್ಟಿಕ್ ಕ್ರೀಡೆಗಳಲ್ಲಿ ಮಾತ್ರ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು. ಕ್ರೀಡಾಶಾಲೆಗೆ 14 ವರ್ಷದೊಳಗಿನ (2000, ಜೂ. 1ರ ನಂತರ ಜನಿಸಿದವರು) 8ನೇ ತರಗತಿಗೆ ಪ್ರವೇಶ ಪಡೆಯಲು ಅರ್ಹರಾದ ಬಾಲಕ, ಬಾಲಕಿಯರಿಗೆ ಅಥ್ಲೆಟಿಕ್, ಹಾಕಿ, ವಾಲಿಬಾಲ್, ಬಾಸ್ಕೆಟ್‌ಬಾಲ್, ಫುಟ್‌ಬಾಲ್, ಜಿಮ್ನಾಸ್ಟಿಕ್, ಜುಡೋ, ಕುಸ್ತಿ ಮತ್ತು ಸೈಕ್ಲಿಂಗ್ ಕ್ರೀಡೆಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಕೆ.ಆರ್. ನಗರ ತಾಲೂಕು ಕ್ರೀಡಾಂಗಣದಲ್ಲಿ ಜ.7 ರಂದು ಮತ್ತು ಜ.8 ರಂದು ಚುಂಚನಕಟ್ಟೆಯ ಶ್ರೀ ಆದಿಚುಂಚನಗಿರಿ ಬಾಲ ಜಗತ್ ವಿದ್ಯಾಸಂಸ್ಥೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಜ.24ರ ಬೆಳಗ್ಗೆ 8ಕ್ಕೆ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ 14 ವರ್ಷದೊಳಗಿನ ಕಿರಿಯರ ವಿಭಾಗದ ಆಯ್ಕೆ ನಡೆಸಲಾಗುವುದು.
ಇಲಾಖೆಯಿಂದ ನಡೆಸುವ ಕ್ರೀಡಾಶಾಲೆಗೆ 18 ವರ್ಷದೊಳಗಿನ ಹಿರಿಯರ ವಿಭಾಗದ ಯುವಕ, ಯುವತಿಯರು ಕ್ರೀಡಾ ವಸತಿ ನಿಲಯಗಳಿಗೆ ಅಥ್ಲೆಟಿಕ್, ಹಾಕಿ, ವಾಲಿಬಾಲ್, ಬ್ಯಾಸ್ಕೆಟ್‌ಬಾಲ್, ಫುಟ್‌ಬಾಲ್, ಜಿಮ್ನಾಸ್ಟಿಕ್, ಜುಡೋ, ಕುಸ್ತಿ ಮತ್ತು ಸೈಕ್ಲಿಂಗ್ ಕ್ರೀಡೆಯಲ್ಲಿ ಪ್ರಥಮ ಹಂತದ ರಾಜ್ಯಮಟ್ಟದ ಆಯ್ಕೆಯನ್ನು ಜ. 25ರ ಬೆಳಗ್ಗೆ 8ಕ್ಕೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಸಲಾಗುವುದು.
ಕ್ರೀಡಾ ವೇತನ: ಇಲಾಖೆಯಿಂದ ಮಾಧ್ಯಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಾರ್ಷಿಕ 3000 ಪ್ರೋತ್ಸಾಹಕವಾಗಿ ಕ್ರೀಡಾ ವಿದ್ಯಾರ್ಥಿ ವೇತನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಅಥವಾ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಾಜ್ಯ ತಂಡ ಪ್ರತಿನಿಧಿಸಿ ಭಾಗವಹಿಸಿದ ಕ್ರೀಡಾಪಟುಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಹರಿರುತ್ತಾರೆ. ಆಸಕ್ತರು ಜ.31 ರೊಳಗೆ ಅರ್ಜಿ ಸಲ್ಲಿಸಬಹುದು.
ಜ. 10 ರಿಂದ ಬಳ್ಳಾರಿ ಜಿಲ್ಲೆ ಹಂಪಿಯಲ್ಲಿ ನಡೆಯುವ ಹಂಪಿ ಉತ್ಸವ ನಿಮಿತ್ತ ಗ್ರಾಮೀಣ ಕ್ರೀಡೆಗಳಿಗೆ ಕ್ರೀಡಾ ತಂಡ ನಿಯೋಜಿಸಲಾಗುತ್ತಿದೆ. ರಾಜ್ಯಮಟ್ಟದ ಕಬಡ್ಡಿ, ಕುಸ್ತಿ, ಮಲ್ಲಕಂಬ, ಹಗ್ಗಜಗ್ಗಾಟ, ಬಾಡಿ ಬಿಲ್ಡಿಂಗ್, ಸೈಕ್ಲಿಂಗ್, ಪವರ್ ಲಿಫ್ಟಿಂಗ್, ಬಿಲ್ಲುಗಾರಿಕೆ, ಶೀಲರೋಹಣಾ, ಗಾಳಿಪಟ ಮುಂತಾದ ಕ್ರೀಡೆ ಸಂಘಟಿಸಲಾಗುತ್ತಿದೆ. ದೂ. 0821- 2564179 ಸಂಪರ್ಕಿಸಬಹುದು ಎಂದು ಇಲಾಖೆಯ ಸಹಾಯಕ ನಿರ್ದೇಶಕ ಕೆ. ಸುರೇಶ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement