ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಛಲವಿದ್ದಾಗ ಗುರಿ ತಲುಪಲು ಸಾಧ್ಯ

Mainashree
Updated On : 3 Jan 2014, 11:16 am

ನಂಜನಗೂಡು: ನಮ್ಮ ಗುರಿ ಎತ್ತರವಾಗಿರಬೇಕು. ಸಾಧಿಸಲೇಬೇಕೆಂಬ ಛಲವಿದ್ದಾಗ ಮಾತ್ರ ನಿರ್ದಿಷ್ಟ ಗುರಿ ಮುಟ್ಟಲು ಸಾಧ್ಯ ಎಂದು ನಂಜನಗೂಡು ಉಪ ವಿಭಾಗದ ಡಿವೈಎಸ್ಪಿ ಡಾ.ಪಿ. ರಾಜಾ ಹೇಳಿದರು.
ಶುಕ್ರವಾರ ರೋಟರಿ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶಾಲಾ ಮಕ್ಕಳು ಶಿಕ್ಷಕರ ಮೇಲೆ ಭಕ್ತಿ ಗೌರವ ಇಡಬೇಕು. ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಹೋದರೂ, ಅದಕ್ಕೆ ನಮಗೆ ವಿದ್ಯೆ ನೀಡಿದ ಗುರುಗಳೆ ಕಾರಣ. ಸಾಮಾನ್ಯ ಕುಟುಂಬದಿಂದ ಬಂದ ನಾನು ತಮಿಳುನಾಡಿನ ಸಣ್ಣ ಹಳ್ಳಿಯಲ್ಲಿ ಜನಿಸಿ 8 ಕಿ.ಮೀ ದೂರದ ನೈವೇಲಿಯಲ್ಲಿ ಎಂಬ ಊರಿನಲ್ಲಿ ವ್ಯಾಸಂಗ ಮಾಡಿದೆನು ಎಂದು ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಪುರುಷೋತ್ತಮ್ ಮಾತನಾಡಿ, 6ನೇ ವಯಸ್ಸಿನಿಂದ 16 ರವರೆಗೂ ಪ್ರತಿ ಮಕ್ಕಳು ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು. ಯಾವುದೇ ಕಾರಣದಿಂದ ಶಾಲೆಯಿಂದ ವಂಚಿತರಾಗಬಾರದು ಎಂಬುದು ಸರ್ಕಾರದ ಆಶಯವಾಗಿದೆ. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳನ್ನು ನಿರಂತರವಾಗಿ ಶಾಲೆಗೆ ಕಳುಹಿಸಬೇಕೆಂದು ಕೆರೆ ನೀಡಿದರು.
ಇದೇ ವೇಳೆ ಗ್ರಾಮಾಂತರ ಪ್ರದೇಶದಿಂದ ಬರುವ ಮಕ್ಕಳಿಗೆ ಅನುಕೂಲವಾಗಲೆಂದು ಶಾಲೆಯಿಂದ ಖರೀದಿಸಿರುವ 15 ಲಕ್ಷದ ಟಾಟಾ ಮಿನಿ ಬಸ್ ಅನ್ನು ಡಿವೈಎಸ್ಪಿ ಡಾ.ಪಿ. ರಾಜಾ ಉಧ್ಘಾಟಿಸಿದರು. ಭಾರತೀಯ ಜೀವಾ ವಿಮಾ ನಿಗಮದ ಹಿರಿಯ ಶಾಖಾಧಿಕಾರಿ ಜಗದೀಶ್, ರೋಟರಿ ಸಂಸ್ಥೆ ಅಧ್ಯಕ್ಷ ಕೆ.ಜಿ. ರಾಮಚಂದ್ರ, ಅಧ್ಯಕ್ಷ ಎಚ್.ಆರ್. ಕನಕರಾಜ್, ಕಾರ್ಯದರ್ಶಿ ಎಚ್.ಎಸ್. ಗೋಪಾಲ್, ಉಪಾಧ್ಯಕ್ಷ ಜಿ. ಕಿಟ್ಟಪ್ಪ, ಖಜಾಂಚಿ ಸಿ.ಪ್ರಕಾಶ್ ಚಂದ್ ಜೈನ್, ಮುಖ್ಯ ಶಿಕ್ಷಕಿ ಬಿ.ಜಿ. ಉಷಾ, ಮೈಸೂರು ವಿಜಯ ವಿಠಲ ಕಾಲೇಜಿನ ಪ್ರಾಶುಂಪಾಲ ಎಚ್. ಸತ್ಯಪ್ರಸಾದ್, ಚಂದ್ರು, ರಮೇಶ್, ಶ್ರೀಕಂಠಪ್ರಸಾದ್, ರಾಕೇಶ್ ಜೈನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement