ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸುದ್ದಿ ಸಂಕ್ಷೇಪ

Mainashree
Updated On : 3 Jan 2014, 9:57 am

ರಾಜ್ಯ ಮಡಿವಾಳರ ಸಮಾವೇಶ
ಕೆ.ಆರ್.ಪೇಟೆ: ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜ.5ರಂದು ರಾಜ್ಯ ಮಡಿವಾಳರ ಬೃಹತ್ ಸಮಾವೇಶ ನಡೆಯಲಿದೆ. ಆದ್ದರಿಂದ ತಾಲೂಕು ಮಡಿವಾಳ ಸಮುದಾಯದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮಾವೇಶವನು ಯಶಸ್ವಿಗೊಳಿಸಬೇಕು ಎಂದು ತಾಲೂಕು ಮಡಿವಾಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಣ್ಣ ತಿಳಿಸಿದ್ದಾರೆ.
ಬತ್ತ, ಮಾವು ಬೆಳೆಗಾರರಿಗೆ ಸಲಹೆ
ಮೈಸೂರು: ಜಿಲ್ಲೆಯಲ್ಲಿನ ಬತ್ತ ಮತ್ತು ಮಾವು ಬೆಳೆಗಾರರಿಗೆ ನಾಗನಹಳ್ಳಿ ಸಮಗ್ರ ಕೃಷಿ ಹವಾಮಾನ ವಿಭಾಗದ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಬತ್ತ ಕಟಾವಿನ ಹಂತದಲ್ಲಿದ್ದಾಗ ಕಟಾವಿನ ಒಂದು ವಾರ ಮುಂಚೆ ಬಿಸಿಗಾಲುವೆ ತೆಗೆದು ನೀರು ಬಸಿಯಬೇಕು. ಮಾವು ಹೂ ಬಿಡುವ ವೇಳೆ ಜಿಗಿಹುಳು ಮತ್ತು ಬೂದಿರೋಗ ಕೀಟ ಬಾಧಿಸಲಿದೆ. ಈ ಹಿನೆಲೆಯಲ್ಲಿ ಮಾವಿನಲ್ಲಿ ಹೂ ಬಿಡುವುದಕ್ಕೆ ಮುಂಚೆ ಹಾಗೂ ಕಾಯಿ ಕಚ್ಚಿದ ಕೂಡಲೆ ಜಿಗಿಹುಳು ಮತ್ತು ಬೂದಿ ರೋಗದ ನಿಯಂತ್ರಣಕ್ಕೆ ಗಿಡಗಳಿಗೆ 1.5 ಮಿ.ಲೀ. ರೋಗರ್ ಜೊತೆಗೆ 3 ಗ್ರಾಂ ನೀರಿನಲ್ಲಿ ಕರಗುವ ಗಂಧಕವನು ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸಬೇಕು. ಮಾಹಿತಿಗೆ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಸಿ.ಗೋವಿಂದರಾಜು ಅಥವಾ ಸಹ ಸಂಶೋಧಕ ಎನ್. ನರೇಂದ್ರ ಬಾಬು ಅವರ ದೂ.0821- 2591267 ಸಂಪರ್ಕಿಸಬಹುದು.
ವಿಶ್ವನಾಥ್‌ಗೆ ಸನ್ಮಾನ
ಮೈಸೂರು: ಮಡಿಕೇರಿಯಲ್ಲಿ ನಡೆಯುವ 80ನೇ ಅಖಿಲ ಭಾರತ ಕನಡ ಸಾಹಿತ್ಯ ಸಮ್ಮೇಳನದಲ್ಲಿ ಕನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಮೈಸೂರಿನ ಎಂ.ಬಿ. ವಿಶ್ವನಾಥ್ ಅವರನು ಸನ್ಮಾನಿಸಲಾಗುವುದು. ಜ.9 ರಂದು ಈ ಸನ್ಮಾನ ನಡೆಯಲಿದ್ದು, ಸೇವೆ ಸಲ್ಲಿಸಿರುವ ಗಣ್ಯರನು ಗುರುತಿಸಿ ಗೌರವಿಸುವ ಪರಂಪರೆಯನು ಪರಿಷತ್ತು ಪಾಲಿಸಿಕೊಂಡು ಬರುತ್ತಿದ್ದು, ಕನಡಪರ ಸಾಧಕರನು ಸನ್ಮಾನಿಸಲಾಗುವುದು ಎಂದು ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ತಿಳಿಸಿದ್ದಾರೆ.
ವ್ಯಕ್ತಿ ಸಾವು
ಮೈಸೂರು: ಅನಾರೋಗ್ಯದಿಂದ ಬಳಲಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಕೆ.ಆರ್. ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸುಮಾರು 55 ರಿಂದ 60 ವರ್ಷ ವಯಸ್ಸಿನ ವ್ಯಕ್ತಿ ಅಕ್ಕಿಚೌಕದ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಜ.1 ರಂದು ಮೃತಪಟ್ಟಿದ್ದಾರೆ. 5.5 ಅಡಿ ಎತ್ತರ, ಕೋಲುಮುಖ, ಕಪ್ಪು ಬಣ್ಣ ಇರುವ ಮೃತ ವ್ಯಕ್ತಿ ಮಾಸಲು ಬೂದಿ ಬಣ್ಣದ ಶರ್ಟ್ ಧರಿಸಿದ್ದು, ಹೊಟ್ಟೆಯ ಬಲ ಭಾಗದಲ್ಲಿ ಹಳೆಯ ಗಾಯದ ಗುರುತಿದೆ. ದೂ.2418107, 2418307 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement