ಸ್ವಾಗತ ಕಮಾನು ನಿರ್ಮಾಣಕ್ಕೆ ಗುದ್ದಲಿಪೂಜೆ
ಎಚ್.ಡಿ. ಕೋಟೆ: ಮೈಸೂರು- ಮಾನಂದವಾಡಿ ರಸ್ತೆಯ ಕಂಚಮಳ್ಳಿ ಗ್ರಾಮದ ಬಳಿ ತಾಪಂ ವತಿಯಿಂದ ಕಮಾನು ನಿರ್ಮಾಣಕ್ಕೆ ತಾಪಂ ಅಧ್ಯಕ್ಷ ನಾಗೇಂದ್ರಸ್ವಾಮಿ ಶುಕ್ರವಾರ ಗುದ್ದಲಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ತಾಪಂನಿಂದ ಸುಮಾರು 6 ಲಕ್ಷ ವೆಚ್ಚದಲ್ಲಿ ನೂತನ ಸ್ವಾಗತ ಕಮಾನು ನಿರ್ಮಿಸಲು ತೀರ್ಮಾನಿಸಲಾಗಿದೆ. ಇದೇ ಜಾಗದಲ್ಲಿ ಈ ಹಿಂದೆ ನಿರ್ಮಿಸಿದ್ದ ವನಸಿರಿ ನಾಡಿಗೆ ಸುಸ್ವಾಗತ ಎಂಬ ಕಮಾನು ಕಳೆದ 3 ವರ್ಷದ ಹಿಂದೆ ಬಿದ್ದು ಹೋಗಿದ್ದರಿಂದ ಈಗ ಮತ್ತೆ ಹೊಸದಾಗಿ ನಿರ್ಮಿಸುತ್ತಿದ್ದೇವೆ. ಈಗಾಗಲೇ ಅಭಿವೃದ್ಧಿಗಾಗಿ ತಾಪಂನಲ್ಲಿ 2.50 ಲಕ್ಷ ಕಾಯ್ದಿರಿಸಲಾಗಿದ್ದು ಉಳಿದ ಹಣವನ್ನು ಶಾಸಕ ಎಸ್. ಚಿಕ್ಕಮಾದು ಅವರು ನೀಡುವುದಾಗಿ ತಿಳಿಸಿದ್ದಾರೆ ಎಂದರು. ಜೆಡಿಎಸ್ ಅಧ್ಯಕ್ಷ ಸಿ.ವಿ. ನಾಗರಾಜು, ಮುಖಂಡರಾದ ಪುರದಕಟ್ಟೆ ಬಸವರಾಜು, ಉಡ ನಾಗರಾಜು, ಕನ್ನಡ ಸೇನೆಯ ಪದಾಧಿಕಾರಿಗಳಾದ ಮಟಕೆರೆ ರಾಜೇಶ್, ತಹಸೀಲ್ದಾರ್ ಕೃಷ್ಣ, ತಾಪಂ ಇಒ ಲಿಂಗರಾಜು, ಪಿಡಬ್ಲ್ಯೂಡಿ ಇಲಾಖೆಯ ಎಇಇ ಮೋಹನ್ ಕುಮಾರ್, ಜಿಪಂ ಎಇಇ ಮನೋಹರ್, ಜೆಇ ಸಿದ್ದರಾಜು ಇದ್ದರು.