ಇಬ್ಬರ ಶವ ಪತ್ತೆ
ಮೈಸೂರು: ಪ್ರತ್ಯೇಕ ಪ್ರಕರಣಗಳಲ್ಲಿ ಮೈಸೂರು ಮತ್ತು ಚಾಮರಾಜನಗರ ರೈಲು ನಿಲ್ದಾಣಗಳಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಮೃತಪಟ್ಟಿದ್ದಾರೆ. ಮೈಸೂರು ರೈಲು ನಿಲ್ದಾಣದ ಫ್ಲಾಟ್ ಫಾರಂ 2ರಲ್ಲಿ ರೈಲಿನ ಬೋಗಿ ಶೌಚಾಲಯದ ಬಳಿ ಶನಿವಾರ 55 ವರ್ಷದ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾರೆ. ಚಹರೆ- 5.6 ಅಡಿ ಎತ್ತರ, ದೃಢಕಾಯ ಮೈಕಟ್ಟು, ಕಪ್ಪು ಮೈಬಣ್ಣ, ದುಂಡುಮುಖ, ತಲೆಯಲ್ಲಿ ಕಪ್ಪು- ಬಿಳಿ ಕೂದಲು, ಕುರುಚಲು ಗಡ್ಡ-ಮೀಸೆ ಬಿಟ್ಟಿರುತ್ತಾರೆ. ಸಿಮೆಂಟ್ ಬಣ್ಣದ ಜರ್ಕಿನ್, ಹಸಿರು ಬಣ್ಣದ ಸ್ವೆಟರ್, ಕಪ್ಪು ಬಣ್ಣದ ಪ್ಯಾಂಟ್, ಬಲಗೈಯಲ್ಲಿ ಕೆಂಪು ಬಣ್ಣದ ದಾರ, ಕಪ್ಪು- ಕಂದು ಬಣ್ಣದ ಪ್ಯಾರಾಗನ್ ಚಪ್ಪಲಿ ಧರಿಸಿದ್ದಾರೆ. ಮೃತರ ದೇಹವನ್ನು ಮೈಸೂರು ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿ ಇರಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಚಾಮರಾಜನಗರ ರೈಲು ನಿಲ್ದಾಣದ ವಾಟರ್ ಟ್ಯಾಂಕ್ ಹತ್ತಿರ 55 ವರ್ಷದ ಅಪರಿಚಿತ ವ್ಯಕ್ತಿ ಗುರುವಾರ ಮೃತಪಟ್ಟಿದ್ದಾರೆ. ಚಹರೆ- 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ದುಂಡು ಮುಖ, ಬೊಕ್ಕ ತಲೆಯಲ್ಲಿ ಒಂದೂವರೆ ಇಂಚು ಉದ್ದದ ಕಪ್ಪು-ಬಿಳಿ ಕೂದಲು, ಕುರುಚಲು ಗಡ್ಡ- ಮೀಸೆ ಬಿಟ್ಟಿರುತ್ತಾರೆ. ಮೃತರ ದೇಹವನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮೃತರ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ದೂ. 0821- 2516579 ಸಂಪರ್ಕಿಸಲು ರೈಲ್ವೆ ಠಾಣೆ ಪೊಲೀಸರು ಕೋರಿದ್ದಾರೆ.