ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಿರ್ವಾಹಕ ಆತ್ಮಹತ್ಯೆ ಪ್ರಕರಣ: ನೌಕರರ ಅಹೋರಾತ್ರಿ ಧರಣಿ

Mainashree
Updated On : 5 Jan 2014, 10:41 am

ಎಚ್.ಡಿ. ಕೋಟೆ: ಹಿರಿಯ ಅಧಿಕಾರಿಗಳ ಕಿರುಕುಳ ತಾಳಲಾರದೆ ನಿರ್ವಾಹಕ ಜಿ.ಎಂ. ಮಂಜಪ್ಪ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಎಚ್.ಡಿ. ಕೋಟೆ ಘಟಕದ ನಿರ್ವಾಹಕರು- ಚಾಲಕರು ಅಹೋರಾತ್ರಿ ಧರಣಿ ನಡೆಸಿದರು.ಮಂಜಪ್ಪ ಶವವನ್ನು ಪಟ್ಟಣಕ್ಕೆ ತರಬೇಕು. ಘಟನೆಗೆ ಕಾರಣವಾಗಿರುವ ತಪಾಸಣೆ ಅಧಿಕಾರಿ ಮಾಯೀಗೌಡ ಹಾಗು ಇತರ ಇಬ್ಬರನ್ನು ಅಮಾನತುಗೊಳಿಸಬೇಕು ಹಾಗೂ ಕಳೆದ 24 ಗಂಟೆಯಿಂದ ಬಸ್‌ಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆಗಳಿದಿರುವ ತಮ್ಮ ಮೇಲೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಗ್ರಾಮೀಣ ಡಿಸಿ ಬಿ.ವಿ. ಶ್ರೀನಿವಾಸ್ ಕಾರ್ಮಿಕ ಮುಖಂಡರ ಜತೆಯಲ್ಲಿ ಮಾತುಕತೆ ನಡೆಸಿ, ನಿಮ್ಮ ಬೇಡಿಕೆಗಳನ್ನು ನಾವು ಈಡೇರಿಸುತ್ತೇವೆ. ಘಟನೆಗೆ ಕಾರಣವಾಗಿರುವ ಮೂವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement