'ಮಾನಿನಿಯರಿಗೆ ಸಾಮಾಜಿಕ ಪ್ರಜ್ಞೆ ಅಗತ್ಯ'
ಹುಣಸೂರು: ಗ್ರಾಮೀಣ ಮಹಿಳೆಯರಲ್ಲಿ ಸಾಮಾಜಿಕ ಪ್ರಜ್ಞೆ ಮೂಡಿದಲ್ಲಿ ಮಾತ್ರ ಸಮಾಜವನ್ನು ಕಾಡುತ್ತಿರುವ ಹಲವಾರು ಸಾಮಾಜಿಕ ಪಿಡುಗು ಹೋಗಲಾಡಿಸಲು ಸಾಧ್ಯ ಎಂದು ಕೇಂದ್ರೀಯ ಕಾರ್ಮಿಕ ಶಿಕ್ಷಣ ಮಂಡಳಿ ಅಧಿಕಾರಿ ಶಂಕರಲಿಂಗೇಗೌಡ ಅಭಿಪ್ರಾಯಪಟ್ಟರು.
ತಾಲೂಕಿನ ಕರ್ಣಕುಪ್ಪೆ ಗ್ರಾಪಂ ವ್ಯಾಪ್ತಿಯ ಕಣಗಾಲು ಗ್ರಾಮದ ಸ.ಹಿ.ಪ್ರಾಥಮಿಕ ಶಾಲೆಯಲ್ಲಿ ಕೇಂದ್ರೀಯ ಕಾರ್ಮಿಕ ಶಿಕ್ಷಣ ಮಂಡಳಿ ಹಾಗೂ ಕರ್ಣಕುಪ್ಪೆ ಗ್ರಾಪಂ ಸಹಯೋಗದಲ್ಲಿ ಪ.ಪಂಗಡ ಮಹಿಳೆಯರಿಗೆ ಆಯೋಜಿಸಿದ್ದ ಎರಡು ದಿನಗಳ ಜಾಗೃತಿ ಶಿಬಿರದಲ್ಲಿ ಅವರು
ಮಾತನಾಡಿದರು.
ಗ್ರಾಮದ ಅಭಿವೃದ್ಧಿಯ ಅಡಿಪಾಯ ಮಹಿಳೆಯರ ಜಾಗೃತ ಮನಸಿನಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಮಂಡಳಿಯು ಗ್ರಾಮದ ಪರಿಶಿಷ್ಟ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಎರಡು ದಿನಗಳ ಶಿಬಿರ ಏರ್ಪಡಿಸಿದೆ ಶಿಬಿರದ ಸದುಪಯೋಗವಾಗಲಿ ಎಂದರು.
ಕರ್ಣಕುಪ್ಪೆ ಆರೋಗ್ಯ ಸಹಾಯಕ ಎಚ್.ಬಿ. ಹನುಮಂತು, ಸ್ವಯಂ ಸೇವಕ ಶಿವರಾಜು, ಅಂಗನವಾಡಿ ಸಹಾಯಕಿಯರು, ಶಿಕ್ಷಕರು ಇದ್ದರು.