ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ರಂಗಾಯಣ ವಿಸ್ತರಣೆಗೆ ಆದ್ಯತೆ: ಸಚಿವ

Mainashree
Updated On : 5 Jan 2014, 11:36 am

ಮೈಸೂರು: ರಂಗಾಯಣದ ವಿಸ್ತರಣೆ ಮತ್ತು ಕಲಾವಿದರಿಗೆ ಸೇವಾ ಭದ್ರತೆ ಕಲ್ಪಿಸುವ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಹೇಳಿದರು.
ರಂಗಾಯಣದ ವನರಂಗದಲ್ಲಿ ಭಾನುವಾರ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಭಿತ್ತಿಪತ್ರ ಮತ್ತು ಕ್ಯಾಲೆಂಡರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ರಂಗಾಯಣ ನಿರ್ದೇಶಕರು, ವಿಸ್ತರಣೆಗೆ ಸ್ಥಳಾವಕಾಶ, ಕಲಾವಿದರಿಗೆ ಸೇವಾ ಭದ್ರತೆ ಕಲ್ಪಿಸಬೇಕು ಎಂಬ ಎರಡು ಬೇಡಿಕೆ ಇಟ್ಟಿದ್ದಾರೆ.  ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಬಜೆಟ್‌ನಲ್ಲಿ ಈ ವಿಷಯ ಸೇರಿಸಲಾಗುವುದು. ಮುಖ್ಯಮಂತ್ರಿಗಳು ಮೈಸೂರು ವಿವಿ ಶತಮಾನೋತ್ಸವ ಮತ್ತು ರಂಗಾಯಣದ ಬಗ್ಗೆ ಆಸಕ್ತಿ ಹೊಂದಿದ್ದಾರೆ ಎಂದ ಪ್ರಸಾದ್ ರಂಗಾಯಣದ ಕೆಲಸಗಳಲ್ಲಿ ಜಿಲ್ಲಾಡಳಿತವೂ ಸಹಕರಿಸುವಂತೆ ಸೂಚಿಸುವುದಾಗಿ ಹೇಳಿದರು.ರಂಗಾಯಣ ನಿರ್ದೇಶಕ ಎಚ್. ಜನಾರ್ದನ್ ಮಾತನಾಡಿದರು.
ನಟ ಮಂಡ್ಯ ರಮೇಶ್, ರಂಗಾಯಣ ಉಪ ನಿರ್ದೇಶಕ ಎಸ್.ಐ ಬಾವಿಕಟ್ಟಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement