ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವಿದ್ಯಾರ್ಥಿ ನಿಲಯಕ್ಕೆ ತಾಪಂ ಅಧ್ಯಕ್ಷರ ದಿಢೀರ್ ಭೇಟಿ

Mainashree
Updated On : 5 Jan 2014, 11:39 am

ಕೆ.ಆರ್. ನಗರ: ಪಟ್ಟಣದ ಪಶು ಆಸ್ಪತ್ರೆಯ ಪಕ್ಕ ಇರುವ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಶುಕ್ರವಾರ ರಾತ್ರಿ ತಾಪಂ ಅಧ್ಯಕ್ಷೆ ಶಶಿಕಲಾ ರಮೇಶ್ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಅಧ್ಯಕ್ಷರು ನಿಲಯಕ್ಕೆ ಭೇಟಿ ನೀಡಿದಾಗ ನಿಲಯ ಪಾಲಕಿ ಪಕ್ಕದ ನಿಲಯಕ್ಕೆ ಹೋಗಿದ್ದರಲ್ಲದೆ ಅಡುಗೆಯವರಾಗಲಿ, ಕಾವಲುಗಾರರಾಗಲಿ ಇರಲಿಲ್ಲ. ಇದರಿಂದ ಕೆರಳಿದ ಅಧ್ಯಕ್ಷರು ಪಾಲಕಿಗೆ ಕರೆ ಮಾಡಿದಾಗ ಅವರು ಸ್ವೀಕರಿಸಲಿಲ್ಲ. ನಂತರ ನಿಲಯಕ್ಕೆ ಬಂದರು.
ಹೆಣ್ಣು ಮಕ್ಕಳ ನಿಲಯದಲ್ಲಿ ಯಾರು ಇಲ್ಲದೆ ಹೊರ ಹೋಗಿದ್ದ ಬಗ್ಗೆ ತಮ್ಮ ಆಕ್ಷೇಪ ವ್ಯಕ್ತಪಡಿಸಿದ ಶಶಿಕಲಾ ರಮೇಶ್, ಹಾಜರಾತಿಯನ್ನು ವಿಚಾರಿಸಿದಾಗ 49 ವಿದ್ಯಾರ್ಥಿಗಳಲ್ಲಿ 24 ಮಂದಿ ಇದ್ದರು. 4 ವಿದ್ಯಾರ್ಥಿಗಳು ಪಾಠಕ್ಕೆ ಹೋಗಿದ್ದಾರೆ ಎಂದು ನಿಲಯ ಪಾಲಕಿ ನಂಜಮ್ಮ ಅದ್ಯಕ್ಷರಿಗೆ ಮಾಹಿತಿ ನೀಡಿದರು. ಆದರೆ ಉಳಿದ ವಿದ್ಯಾರ್ಥಿಗಳ ಬಗ್ಗೆ ವಿಚಾರಿಸಿದಾಗ ಅವರೆಲ್ಲಾ ಮನೆಗೆ ತೆರಳಿದ್ದಾರೆಂದರು. ಲೆಕ್ಕದಲ್ಲಿ ಅವರೆಲ್ಲಾ ನಿಲಯದಲ್ಲಿಯೇ ಇರುವಂತೆ ತೋರಿಸಲಾಗಿತ್ತು.
27 ವಿದ್ಯಾರ್ಥಿನಿಯರಿಗೆ ಕಡಿಮೆ ಅನ್ನ ಮಾಡಿದ್ದ ಅಡುಗೆಯವರು 7 ಗಂಟೆಗೆ ಖಾಲಿ ಮಾಡಿದ್ದರು. ಆದರೆ ಈ ಬಗ್ಗೆ ವಿಚಾರಿಸಿದಾಗ ಅವರು ಆಸ್ಪತ್ರೆಗೆ ತೆರಳಿದ್ದಾರೆ ಎಂದು ನಿಲಯ ಪಾಲಕಿ ಹೇಳಿದರು. ಭೇಟಿ ಸಂದರ್ಭದಲ್ಲಿ ನಿಲಯ ಪಾಲಕರು ಸಮರ್ಪಕವಾಗಿ ಕೆಲಸ ನಿರ್ವಹಿಸದೆ ಕರ್ತವ್ಯ ಲೋಪ ಮಾಡಿರುವುದು ಮತ್ತು ಸರ್ಕಾರದ ಸವಲತ್ತುಗಳನ್ನು ಸರಿಯಾಗಿ ಮಕ್ಕಳಿಗೆ ತಲುಪಿಸದೆ ನಿರ್ಲಕ್ಷ್ಯ ವಹಿಸುತ್ತಿರುವುದು ಕಂಡು ಬಂದರೆ ಅಂತಹವರ ವಿರುದ್ದ ತಾಪಂ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ಎಚ್ಚರಿಸಿದರು.
ತಾಲೂಕು ಆಶ್ರಯ ಸಮಿತಿ ಮಾಜಿ ಸದಸ್ಯ ಹೊಸೂರು ಬಿ. ರಮೇಶ್, ಮುಖಂಡ ರಾಮಣ್ಣ, ಯುವ ಜೆಡಿಎಸ್ ಮುಖಂಡರಾದ ರಾಘು, ರಾಜೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement