ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಹಕಾರ ಸಂಘಗಳಲ್ಲಿ ಗಣಕೀಕರಣ

Mainashree
Updated On : 5 Jan 2014, 11:39 am

ಹುಣಸೂರು: ತಾಲೂಕಿನ ಸಹಕಾರ ಸಂಘಗಳಲ್ಲಿ ಕಂಪ್ಯೂಟರೀಕರಣ ಮಾಡಿಸುವ ಮೂಲಕ ರೈತರಿಗೆ ವಾಣಿಜ್ಯ ಬ್ಯಾಂಕುಗಳ ಮಾದರಿಯಲ್ಲೇ ಸಕಾಲದಲ್ಲಿ ಸಾಲ- ಸೌಲಭ್ಯ ನೀಡಿ ಆಧುನಿಕರಿಸಲು ಚಿಂತಿಸಲಾಗಿದೆ ಎಂದು ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಡಿ. ಹರೀಶ್‌ಗೌಡ ಹೇಳಿದರು.
ತಾಲೂಕಿನ ಬಿಳಿಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕಿನಲ್ಲಿ ನೂತನ ನಿರ್ದೇಶಕರಿಗೆ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
 ರೈತರಿಗೆ ಸಕಾಲದಲ್ಲಿ ಸಾಲ ನೀಡಲು ಮತ್ತು ದಾಖಲೆಗಳ ಸಾಕ್ಷ್ಯಧಾರಗಳ ಮಾಹಿತಿ ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ಕಂಪ್ಯೂಟರೀಕರಣ ಮಾಡಲು ಕೆಲವು ಸಂಘಗಳು ತಾತ್ವಿಕ ಒಪ್ಪಿಗೆ ನೀಡಿವೆ. ಉಳಿದ ಸಹಕಾರ ಸಂಘಗಳ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಜಾರಿಗೆ ತರಲಾಗುವುದು ಎಂದರು.
ಸರ್ಕಾರದಿಂದ ತಮ್ಮ ಡಿಸಿಸಿ ಬ್ಯಾಂಕಿಗೆ ಬರಬೇಕಾದ  ರು. 88 ಕೋಟಿ ಸಾಲಮನ್ನಾ ಮತ್ತು ಮತ್ತು ಸಬ್ಸಿಡಿಹಣವನ್ನು ಶೀಘ್ರವೇ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ.  
  ಹಾಗಾಗಿ ಇನ್ನೊಂದು ವಾರದಲ್ಲಿ ಸಾಲ ಪಡೆಯದ ರೈತರಿಗೆ ಸಾಲ ವಿತರಿಸಲಾಗುವುದು. ಕಳೆದ ಆರು ತಿಂಗಳಿನಿಂದ ಬ್ಯಾಂಕಿನಲ್ಲಿ ಚುನಾವಣೆ ನೆಪವೊಡ್ಡಿ ರೈತರಿಗೆ ಸಾಲ ನೀಡಿಲ್ಲ.
ಸಬ್ಸಿಡಿ ಹಣವನ್ನು ಶೀಘ್ರವೇ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಹಾಗಾಗಿ ಇನ್ನೊಂದು ವಾರದಲ್ಲಿ ಸಾಲ ಪಡೆಯದ ರೈತರಿಗೆ ಸಾಲ ವಿತರಿಸಲಾಗುವುದು.  
 ಕಳೆದ ಆರು ತಿಂಗಳಿನಿಂದ ಬ್ಯಾಂಕಿನಲ್ಲಿ ಚುನಾವಣೆ ನೆಪವೊಡ್ಡಿ ರೈತರಿಗೆ ಸಾಲ ನೀಡಿಲ್ಲ. ನಿರ್ದೇಶಕರಿಗೆ ಚುನಾವಣೆಯಾದರೆ, ಬ್ಯಾಂಕಿನ ನೌಕರರಿಗೆ ಸಾಲ ನೀಡಲು ಏಕೆ ವಿಳಂಬ ಮಾಡಿದ್ದಾರೆ ಎಂಬುದೇ ಅರ್ಥವಾಗುವುದಿಲ್ಲ ಎಂದು ಅವರು ಈ ಸಂದರ್ಭದಲ್ಲಿ ಕಿಡಿಕಾರಿದರು.
ಇದೇ ವೇಳೆ ಎಂಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಚಂದ್ರಶೇಖರ್, ನಿರ್ದೇಶಕರಾದ ಎ.ಟಿ. ಸೋಮಶೇಖರ್, ಜಿ.ಡಿ. ಹರೀಶ್‌ಗೌಡ ಅವರನ್ನು ಸನ್ಮಾನಿಸಲಾಯಿತು.
ಬಿಳಿಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಸನ್ನ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ನಂಜೇಗೌಡ, ಮೇಲ್ವಿಚಾರಕ ಮಂಜುಗೌಡ, ಕೆ. ರವಿ, ಎಂ.ಟಿ. ಕುಮಾರ್, ಲಿಂಗರಾಜು, ಬ್ಯಾಂಕಿನ ನಿರ್ದೇಶಕ ರಾಜೇಶ್, ಭಾಗ್ಯಮ್ಮ, ಪ್ರಭಕಾರ್, ವೈಕುಂಠೇಗೌಡ, ಬೀರೇಗೌಡ, ಮಂಗಳಮ್ಮ, ಬಸವರಾಜು, ಮಹದೇವ್, ಬಾಲು, ಕಾಳಿದಾಸನಾಯ್ಕ, ರಫೀಕ್, ಧಣಿ ಇದ್ದರು. ವ್ಯವಸ್ಥಾಪಕ ಮಹದೇವ್ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement