ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸುದ್ದಿ ಸಂಕ್ಷೇಪ

Mainashree
Updated On : 5 Jan 2014, 11:36 am

ರಾಘವೇಂದ್ರಗೆ ಪಿಎಚ್.ಡಿ  
ಮೈಸೂರು: ಪ್ರೊ. ಬಿ.ಪಿ. ಮಹೇಶ್‌ಚಂದ್ರ ಗುರು ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಸಾದರಪಡಿಸಿದ ಆರ್. ರಾಘವೇಂದ್ರ ಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿ, ಅವರಿಗೆ ಸಂವಹನ ಮತ್ತು ಪತ್ರಿಕೋದ್ಯಮ ವಿಷಯದಲ್ಲಿ ಪಿಎಚ್.ಡಿ ನೀಡಿದೆ. ರಾಘವೇಂದ್ರ ಪ್ರಸ್ತುತ ಚಾಮರಾಜನಗರ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪರೀಕ್ಷಾ ತರಬೇತಿ
ಮೈಸೂರು: ರಾಜ್ಯ ಸರ್ಕಾರ ನೌಕರರ ಸಂಘ ಜಿಲ್ಲಾ ಶಾಖೆಯಿಂದ ಸರ್ಕಾರಿ ನೌಕರರಿಗೆ 2013-14ನೇ ಸಾಲಿನ 2ನೇ ಅಧಿವೇಶನದ ಇಲಾಖಾ ಪರೀಕ್ಷೆಗಳ ತರಬೇತಿ ಶಿಬಿರವನ್ನು ಜ. 16 ರಿಂದ ಆರಂಭಿಸಲಿದ್ದು, ನೌಕರರು ಜ. 6 ರಿಂದಲೇ ಸಂಘದ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧ್ಯಕ್ಷ ಎಚ್.ಕೆ. ರಾಮು ಕೋರಿದ್ದಾರೆ. ದೂ. 0821-2427890 ಇಲ್ಲಿಗೆ ಸಂಪರ್ಕಿಸಬಹುದು.
ಸಾಂಸ್ಕೃತಿಕ ಸ್ಪರ್ಧೆ
ಮೈಸೂರು: ವಿವೇಕಾನಂದ ಕೇಂದ್ರ ಕನ್ಯಾಕುಮಾರಿ ಶಾಖೆ ಮೈಸೂರು ಘಟಕವು ಜಯನಗರದಲ್ಲಿ ಜ.7 ರಿಂದ 11 ರವರೆಗೆ ಅಂತರ ಶಾಲಾ ಸಾಂಸ್ಕೃತಿಕ ಸ್ಪರ್ಧೆ ಏರ್ಪಡಿಸಿದ್ದು, ಪ್ರತಿದಿನ ಸಂಜೆ 5.30ಕ್ಕೆ ದೇಶಭಕ್ತಿ ಗೀತೆ, ಜಾನಪದ ಗೀತೆ,ದಾಸರಪದ, ಭಜನೆ, ರಂಗೋಲಿ ಸ್ಪರ್ಧೆಗಳು ನಡೆಯಲಿವೆ. ಮೊ. 94494-88228 ಇಲ್ಲಿಗೆ ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement