ಕಳಂಕಿತರಿಗೆ ಸಚಿವ ಸ್ಥಾನ: ಬಿಜೆಪಿ ಪ್ರತಿಭಟನೆ
ಮೈಸೂರು: ವಿವಿಧ ಆರೋಪಗಳಿಗೆ ಸಿಲುಕಿರುವ ಡಿ.ಕೆ.ಶಿವಕುಮಾರ್ ಮತ್ತು ರೋಷನ್ ಬೇಗ್ ಅವರನ್ನು ರಾಜ್ಯ ಸಚಿವ ಸಂಪುಟಕ್ಕೆ ಸೇರಿಸಿಕೊಂಡಿರುವುದನ್ನು ಖಂಡಿಸಿ ನಗರದ ಗಾಂಧಿಚೌಕದಲ್ಲಿ ಸೋಮವಾರ ಪ್ರತಿಭಟಿಸಿದರು.
ಸಂತೋಷ್ ಲಾಡ್ ಅವರನ್ನು ಕಳಂಕಿತರೆಂದು ಸಚಿವ ಸಂಪುಟದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈಬಿಟ್ಟು, ಈಗ ಕಳಂಕಿತರಾದ ಡಿ.ಕೆ. ಶಿವಕುಮಾರ್, ರೋಷನ್ ಬೇಗ್ ಅವರನ್ನು ಸೇರಿಕೊಂಡಿರುವುದು ಸರಿಯಲ್ಲ. ಕಳಂಕಿತರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಅವರು ಒತ್ತಾಯಿಸಿದರು.
ಬಿಜೆಪಿ ನಗರಾಧ್ಯಕ್ಷ ಇ.ಮಾರುತಿರಾವ್ ಪವಾರ್, ಮಾಜಿ ಅಧ್ಯಕ್ಷ ಎಂ. ಶಿವಕುಮಾರ್, ನಗರಪಾಲಿಕೆ ಸದಸ್ಯ ಮ.ವಿ. ರಾಮಪ್ರಸಾದ್, ಮುಖಂಡರಾದ ಶಂಕರ್, ಜೋಗಿ ಮಂಜು, ಶಿಂಧೆ, ಪ್ರಕಾಶ್, ಅಮಿತಾಬ್, ಮೈ.ಕಾ. ಪ್ರೇಮಕುಮಾರ್, ಎಂ.ಎ. ಮೋಹನ್, ಮಹೇಶ್ ಇದ್ದರು.