ಕಾಣಕೋಣ: ಇನ್ನೊಂದು ಕಟ್ಟಡವೂ ಬಿರುಕು
ಪಣಜಿ: ಕಾಣಕೋಣದಲ್ಲಿನ ರೂಬಿ ರೆಸಿಡೆನ್ಸಿ ಕಟ್ಟಡದ ಪಕ್ಕದಲ್ಲಿರುವ ಭಾರತ್ ಡೆವಲಪ್ರ್ಸ್ ನಿರ್ಮಿಸಿದ ಮತ್ತೊಂದು ಕಟ್ಟಡದಲ್ಲಿಯೂ ಬಿರುಕು ಕಾಣಿಸಿಕೊಂಡ ಪರಿಣಾಮ ಕಟ್ಟಡ ಕುಸಿಯಬಹುದು ಎಂಬ ಭೀತಿಯಿಂದ ಸೇನಾ ಪಡೆ ನಡೆಸಿದ್ದ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.
ಇದೇ ರೂಬಿ ರೆಸಿಡೆನ್ಸಿಯ ಒಂದು ಕಟ್ಟಡ ಶನಿವಾರ ಮಧ್ಯಾಹ್ನ ಕುಸಿದು ಸುಮಾರು 19 ಕಾರ್ಮಿಕರು ಮೃತಪಟ್ಟಿದ್ದರು. ಅಷ್ಟೇ ಅಲ್ಲದೆ ಇದೇ ಕಟ್ಟಡಕ್ಕೆ ಹೊಂದಿಕೊಡು ಇನ್ನೂ ಮೂರು ಬಹು ಅಂತಸ್ತಿನ ಕಟ್ಟಡಗಳಿವೆ. ಅವುಗಳಲ್ಲಿಯೂ ಅಪಾರ ಪ್ರಮಾಣದ ಬಿರುಕು ಕಾಣಿಸಿಕೊಂಡಿದ್ದು, ಯಾವುದೇ ಸಮಯದಲ್ಲಿ ಬೇಕಾದರು ಕುಸಿಯಬಹುದು ಎನ್ನಲಾಗುತ್ತಿದೆ. ನಿರ್ಮಾಣ ಕಾಂರ್ು ಪೂರ್ಣಗೊಂಡಿರುವ ಈ ಕಟ್ಟಡದಲ್ಲಿ ಹಲವು ಕುಟುಂಬಗಳು ಈಗಾಗಲೇ ವಾಸ್ತವ್ಯ ಹೂಡಿವೆ. ಬಾಲಿವುಡ್ ಹಿರಿಯ ನಟಿ ಆಶಾ ಪಾರೆಖ್ ಮತ್ತು ಗೋವಾ ಕ್ರೀಡಾ ಸಚಿವ ರಮೇಶ ತವಡಕರ ಅವರೂ ಇಲ್ಲಿಯೇ ವಾಸ್ತವ್ಯ ಮಾಡಿದ್ದಾರೆ. ಅವರ ಕಾಂರ್ಾಲಂುವೂ ಇದೆ. ಡಾ. ಶಾಬಾ ಗಾವಕರ, ಡಾ. ಸೂರಜ್ ಮೀರಾಶಿ, ರಾಜೇಶ ದೇಸಾಯಿ ಸೇರಿದಂತೆ ಹಲವು ಗಣ್ಯರು ಇಲ್ಲಿ ವಾಸಿಸುತ್ತಿದ್ದಾರೆ.
ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ: ಮುನ್ನೆಚ್ಚರಿಕಾ ಕ್ರಮವಾಗಿ ಈ ಕಟ್ಟಡದ ಅಕ್ಕಪಕ್ಕದಲ್ಲಿರುವ ಮನೆಯವರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸಲಾಗಿದೆ. ಅದೂ ಅಲ್ಲದೆ ಈ ಭಾಗದಲ್ಲಿ ಕಟ್ಟಡಗಳಿಗೆ ನೀಡಲಾದ ವಿದ್ಯುತ್ ಸಂಪರ್ಕವನ್ನೂ ಕಡಿತಗೊಳಿಸಲಾಗಿದೆ. ಗುತ್ತಿಗೆದಾರರು ತಲೆಮರೆಸಿಕೊಂಡಿರುವುದರಿಂದ ಶನಿವಾರ ಕುಸಿದ ಕಟ್ಟಡದಲ್ಲಿ ಎಷ್ಟು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು ಎಂದು ನಿಖರ ಮಾಹಿತಿ ಸಿಗುತ್ತಿಲ್ಲ ಎಂದು ದಕ್ಷಿಣ ಗೋವಾ ಜಿಲ್ಲಾಧಿಕಾರಿ ವೆನೆಸಿಯೊ ಪುರ್ತಾದೊ ಹೇಳಿದ್ದಾರೆ. ಭಾರತ್ ಡೆವಲಪ್ರ್ಸ್ ನಿರ್ಮಾಣದ ರೂಬಿ ರೆಸಿಡೆನ್ಸಿಂುಲ್ಲಿ ಶೇ.80ರಷ್ಚು ಫ್ಲ್ಯಾಟ್ಗಳನ್ನು ದೆಹಲಿ ಮತ್ತು ಮುಂಬೈ ಮೂಲದವರಿಗೆ ಮಾರಲಾಗಿದೆ. ದೆಹಲಿ ಮೂಲದ ವ್ಯಕ್ತಿಯೊಬ್ಬರು ಇಲ್ಲಿ ಐದು ಫ್ಲ್ಯಾಟ್ಗಳನ್ನು ಖರೀದಿಸಿದ್ದು, ಕೆಲವೇ ಕೆಲವು ಫ್ಲ್ಯಾಟ್ಗಳನ್ನು ಸ್ಥಳೀಂುರು ಖರೀದಿಸಿದ್ದಾರೆ.
ಕಟ್ಟಡಗಳ ಗುಣಮಟ್ಟ ತಪಾಸಣೆಗೆ ಆದೇಶ: ಭಾರತ್ ಡೆವಲಪರ್ಸ್ ಅವರ ಮತ್ತೊಂದು ಂೋಜನೆ 'ಪೋಲೆಂ ಪ್ಲಾಜಾ' ಕಟ್ಟಡ ನಿರ್ಮಾಣ ಕಾಂರ್ು ಪೋಲೆಂ ಬೀಚ್ನಲ್ಲಿ ನಡೆಂುತ್ತಿದೆ. ಇದೇ ಕಂಪನಿಯು ನಾಗರ್ಸೆ, ದೇವಭಾಗದಲ್ಲಿಯೂ ಕಟ್ಟಡ ನಿರ್ಮಾಣ ಕಾಂರ್ು ಕೈಗೆತ್ತಿಕೊಂಡಿದ್ದು, ಈ ಎಲ್ಲ ಕಟ್ಟಡಗಳ ನಿರ್ಮಾಣದ ಗುಣಮಟ್ಟ ಪರೀಕ್ಷಿಸುವಂತೆ ಮುಖ್ಯಮಂತ್ರಿ ಮನೋಹರ ಪರೀಕರ್ ಆದೇಶಿಸಿದ್ದಾರೆ.
ತಲಾ 2 ಲಕ್ಷ ಪರಿಹಾರ: ಜಾರ್ಖಂಡ್ ಮೂಲದ ಕಾರ್ಮಿಕರ ನಾಂುಕ ಮತ್ತು ಅವರ ಆರು ಸಹೋದ್ಯೋಗಿಗಳು ಇನ್ನೂ ಪತ್ತೆಂಾಗಿಲ್ಲ. ಈ ಕಟ್ಟಡದ ಅವಶೇಷಗಳಡಿಂುಲ್ಲಿ ಇನ್ನೂ ಹಲವರು ಸಿಕ್ಕಿ ಹಾಕಿಕೊಂಡಿರುವ ಶಂಕೆಯಿದೆ. ಶನಿವಾರ ಸಂಭವಿಸಿದ ಈ ದುರ್ಘಟನೆಂುಲ್ಲಿ ಮೃತಪಟ್ಟವರ ಕುಟುಂಬದವರಿಗೆ ಸರ್ಕಾರ ತಲಾ 2 ಲಕ್ಷ ಪರಿಹಾರ ನೀಡಲಿದೆ ಎಂದು ಸಚಿವ ರಮೇಶ ತವಡಕರ ತಿಳಿಸಿದ್ದಾರೆ.
ಮಾಹಿತಿ ಅಲಭ್ಯ: ಈ ದುರ್ಘಟನೆಗೆ ಸಂಬಂಧಿಸಿದಂತೆ ಮೃತ ಕಾರ್ಮಿಕರು ಮತ್ತು ರಕ್ಷಿಸಲಾದ ಕಾರ್ಮಿಕರ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಲಾಗುತ್ತಿಲ್ಲ. ಪೊಲೀಸ್ ಅಧಿಕಾರಿಗಳು ಪತ್ರಕರ್ತರಿಗೆ ಮಾಹಿತಿ ನೀಡಲಾರಂಭಿಸಿದರೆ ಮತ್ತೊಬ್ಬ ಪೊಲೀಸ್ ಅಧಿಕಾರಿಗಳು ಬಂದು ನಮ್ಮ ಕಾಂರ್ಾಚರಣೆಗೆ ತೊಂದರೆ ಮಾಡಬೇಡಿ ಎಂದು ಹೇಳುತ್ತಿದ್ದಾರೆ.