ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಗರದಲ್ಲಿ ಆಟೋ ಸಂಚಾರ ಸಂಪೂರ್ಣ ಬಂದ್

Mainashree
Updated On : 6 Jan 2014, 10:32 am

ಮೈಸೂರು: ಅನಿಲ ದರ ಹೆಚ್ಚಳ ಖಂಡಿಸಿ ಹಾಗೂ ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಆಟೋ ಪ್ರಯಾಣ ದರ ಪರಿಷ್ಕರಣೆಗೆ ಆಗ್ರಹಿಸಿ ಆಟೋ ಚಾಲಕರು ಸೋಮವಾರ ಮುಷ್ಕರ ನಡೆಸಿದರು.
ಭಾನುವಾರ ಮಧ್ಯರಾತ್ರಿ 12 ರಿಂದ ಆರಂಭವಾದ ಈ ಮುಷ್ಕರ ಸೋಮವಾರ ಮಧ್ಯರಾತ್ರಿವರೆಗೆ ಮುಂದವರಿಯಿತು. ಇದರಿಂದಾಗಿ ನಗರದಲ್ಲಿ ಪ್ರಯಾಣಿಕ ಆಟೋಗಳು ರಸ್ತೆಗೆ ಇಳಿಯಲಿಲ್ಲ. ಹಲವು ಆಟೋ ನಿಲ್ದಾಣಗಳಲ್ಲಿ ಆಟೋಗಳನ್ನು ನಿಲ್ಲಿಸಲಾಗಿತ್ತು. ಆದರೆ, ಯಾವ ಚಾಲಕರೂ ಬಾಡಿಗೆಗೆ ಹೋಗದೆ ಮುಷ್ಕರಕ್ಕೆ ಬೆಂಬಲ ಸೂಚಿಸಿದರು.
ಆಟೋ ಮುಷ್ಕರದಿಂದ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮೈಸೂರು ರೈಲು ನಿಲ್ದಾಣ, ಕೆಎಸ್  ಆರ್  ಟಿಸಿ ನಗರ ಮತ್ತು ಗ್ರಾಮಾಂತರ ಬಸ್ ನಿಲ್ದಾಣ ಬಳಿ ಪೊಲೀಸರ ಪಿಸಿಆರ್, ಆ್ಯಂಬುಲೆನ್ಸ್ ವಾಹನಗಳಲ್ಲಿ ಪ್ರಯಾಣಿಕರನ್ನು ನಗರ ಬಸ್ ನಿಲ್ದಾಣ, ಬಸ್ ತಂಗುದಾಣಕ್ಕೆ ತೆರಳಲು ಸಹಕರಿಸಿದರು.
ಶಾಲಾ ಮಕ್ಕಳ ಪರದಾಟ: ಪ್ರಯಾಣಿಕರ ಆಟೋ ಸಂಚಾರ ಮುಷ್ಕರ ಹಿನ್ನೆಲೆಯಲ್ಲಿ ಸಾರ್ವಜನಿಕರು ನಗರ ಸಾರಿಗೆ, ಖಾಸಗಿ ಬಸ್, ಮ್ಯಾಕ್ಸಿ ಕ್ಯಾಬ್ ಹಾಗೂ ಇನ್ನಿತರ ವಾಹನಗಳಲ್ಲಿ ಪ್ರಯಾಣಿಸಿದರು.
ಆಟೋಗಳಿಲ್ಲದೆ ಶಾಲಾ ಮಕ್ಕಳು ಸಹ ಪರದಾಡಿದರು. ಪೋಷಕರು ತಮ್ಮ ಖಾಸಗಿ ವಾಹನಗಳಲ್ಲಿ ಮಕ್ಕಳನ್ನು ಬೆಳಗ್ಗೆ ಶಾಲೆಗೆ ಬಿಟ್ಟು, ಸಂಜೆ ವಾಪಸ್ ಕರೆದುಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಅನಿಲ ಬೆಲೆ ಏರಿಕೆ ಹಿಂಪಡೆಯಬೇಕು. ಮೈಸೂರಿನಲ್ಲಿ ಹೊಸ ಆಟೋಗಳಿಗೆ ರಹದಾರಿ ನೀಡುವುದನ್ನು ನಿಲ್ಲಿಸಬೇಕು ಎಂದು ಮೈಸೂರು ಜಿಲ್ಲಾ ಕುವೆಂಪು ಸರಕು ಹಾಗೂ ಪ್ರಯಾಣಿಕ ಆಟೋ ಚಾಲಕರ ಸಮಿತಿಯವರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.
ಕೆಎಸ್  ಆರ್  ಟಿಸಿ ಗ್ರಾಮಾಂತರ ಬಸ್ ನಿಲ್ದಾಣದಿಂದ ಮೆರವಣಿಗೆ ಹೊರಟ ನೂರಾರು ಮಂದಿ ಆಟೋ ಚಾಲಕರು ಇರ್ವಿನ್ ರಸ್ತೆ, ರೈಲು ನಿಲ್ದಾಣ ವೃತ್ತ, ಜೆಎಲ್  ಬಿ ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ತಮ್ಮ ಮನವಿ ಸಲ್ಲಿಸಿದರು. ಸಮಿತಿಯ ಜಿಲ್ಲಾಧ್ಯಕ್ಷ ಸಿ.ಎನ್. ಪ್ರೇಮ್  ಮೋಹನ್ ಜೆಟ್ಟಿ ನೇತೃತ್ವ ವಹಿಸಿದ್ದರು.

ಹೆಚ್ಚುವರಿ ಬಸ್ ನಿಯೋಜನೆ
ಆಟೋ ಚಾಲಕರ ಮುಷ್ಕರ ಹಿನ್ನೆಲೆಯಲ್ಲಿ ಕೆಎಸ್  ಆರ್  ಟಿಸಿ ಮೈಸೂರು ನಗರ ಸಾರಿಗೆ ವಿಭಾಗ ವತಿಯಿಂದ ಹೆಚ್ಚುವರಿಯಾಗಿ 25 ಬಸ್  ಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು. ಅಲ್ಲದೆ, ಪ್ರಮುಖ ಬಡಾವಣೆಗಳಿಗೆ ಸಂಚರಿಸುವ ಬಸ್ಸುಗಳಿಗೆ ದಿನವಹಿ ಸುತ್ತುಗಳನ್ನು ಹೆಚ್ಚಿಸಲಾಗಿದೆ. ನಗರ ಬಸ್ ನಿಲ್ದಾಣದಲ್ಲಿ ಎಂದಿನಂತೆ ಪ್ರಯಾಣಿಕರಿದ್ದಾರೆ ಎಂದು ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ರಮೇಶ್ 'ಕನ್ನಡಪ್ರಭ'ಕ್ಕೆ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement