ಬಿ.ಇಡಿ ಕೋರ್ಸಿಗೆ ಪ್ರವೇಶಾತಿ ಆರಂಭ
ಮೈಸೂರು: 2013-14ನೇ ಸಾಲಿನ ಸರ್ಕಾರಿ ಕೋಟಾದಡಿ ಬಿ.ಇಡಿ ಕೋರ್ಸಿಗೆ ಜ.10 ರವರೆಗೆ ಪ್ರವೇಶಾತಿ ಪ್ರಕ್ರಿಯೆ ನಡೆಯಲಿದ್ದು, ಆಸಕ್ತರು ಎನ್-27 ನೋಡೆಲ್ ಕೇಂದ್ರವಾದ ನಜರ್ಬಾದ್ ವಸಂತಮಹಲ್ನಲ್ಲಿ ಎಲ್ಲಾ ದಾಖಲಾತಿ ಸಲ್ಲಿಸಿ ಪ್ರವೇಶಾತಿ ಪಡೆಯಬಹುದು.
ಸರ್ಕಾರದಿಂದ ಮಾನ್ಯತೆ ಪಡೆದಿರುವ ಅನುದಾನಿತ ಮತ್ತು ಅನುದಾನ ರಹಿತ ಬಿ.ಇಡಿ ಕಾಲೇಜುಗಳಲ್ಲಿ ಸೀಟು ಬಯಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದವರು ತಮ್ಮ ಮೂಲ ದಾಖಲೆಗಳನ್ನು ಪರಿಶೀಲಿಸಿಕೊಳ್ಳುವಂತೆ ಪ್ರಾಂಶುಪಾಲೆ ಎಂ. ಜೊಹರಾ ಜಬೀನ್ ಕೋರಿದ್ದಾರೆ.
ಅಭ್ಯರ್ಥಿಗಳ ಆರೋಪ: ಬಿ.ಇಡಿ ಕೋರ್ಸ್ನ ಸೀಟು ಹಂಚಿಕೆಯಲ್ಲಿ ಹಲವಾರು ಲೋಪ ಕಂಡುಬಂದಿವೆ ಎಂದು ಕೆಲವು ಅಭ್ಯರ್ಥಿಗಳು ಆರೋಪಿಸಿದ್ದಾರೆ. ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡಿರುವ ಸಂಸ್ಥೆಯನ್ನು ಬಿಟ್ಟು ಬೇರೆ ಸಂಸ್ಥೆಗಳಿಗೆ ವರ್ಗಾಯಸಲಾಗಿದೆ. ಶೇಕಡಾವಾರು ಕಡಿಮೆ ಅಂಕಗಳನ್ನು ಪಡೆದವರಿಗೆ ಸರ್ಕಾರಿ ಹಾಗೂ ಅನುದಾನಿತ ಸಂಸ್ಥೆ, ಹೆಚ್ಚು ಅಂಕ ಪಡೆದವರನ್ನು ಅನುದಾನರಹಿತ ಸಂಸ್ಥೆಗಳಿಗೆ ನಿಯೋಜಿಸಲಾಗಿದೆ. ಸಂಬಂಧಪಟ್ಟವರು ಗಮನಹರಿಸಿ, ಗೊಂದಲ ನಿವಾರಿಸುವಂತೆ ಅವರು ಆಗ್ರಹಿಸಿದ್ದಾರೆ.