ಬೋನಿಗೆ ಬಿದ್ದ ಮತ್ತೊಂದು ಚಿರತೆ
ಎಚ್.ಡಿ. ಕೋಟೆ: ಸುಮಾರು 6 ವರ್ಷದ ಹೆಣ್ಣು ಚಿರತೆಯೊಂದು ಸೆರೆ ಸಿಕ್ಕಿರುವ ಘಟನೆ ತಾಲೂಕಿನ ಹಂಪಾಪುರ ಹೋಬಳಿ ಹಿರೇನಂದಿ ಗ್ರಾಮದಲ್ಲಿ ಜರುಗಿದೆ.
ಗ್ರಾಮದ ಶಿವರಾಜಪ್ಪ ಎಂಬವರ ಜಮೀನಿನಲ್ಲಿ ಅರಣ್ಯ ಇಲಾಖೆಯವರು ಕೆಲ ದಿನಗಳ ಹಿಂದೆ ಇಟ್ಟಿದ್ದ ಬೋನಿಗೆ ಈ ಚಿರತೆ ಸೋಮವಾರ ಬೆಳಗ್ಗೆ ಬಿದ್ದಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಪಿರಿಯಾಪಟ್ಟಣ ತಾಲೂಕು ದೊಡ್ಡ ಹರವೆ ಅರಣ್ಯ ಪ್ರದೇಶಕ್ಕೆ ಈ ಚಿರತೆ ಬಿಡಲಾಗಿದೆ.
ಇದರೊಂದಿಗೆ ಕಳೆದ 40 ದಿನಗಳ ಅವಧಿಯಲ್ಲಿ ತಾಲೂಕಿನ ಹಿರೇನಂದಿ ಗ್ರಾಮದಲ್ಲಿ 5 ಹಾಗೂ ಜಕ್ಕಹಳ್ಳಿ ಗ್ರಾಮದಲ್ಲಿ ಒಂದು ಚಿರತೆಯನ್ನು ಅರಣ್ಯ ಇಲಾಖೆಯವರು ಗ್ರಾಮದವರ ಸಹಕಾರದೊಂದಿಗೆ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ. ಸ್ಥಳದಲ್ಲಿ ಎಸಿಎಫ್ ಮಂಜುನಾಥ್, ಆರ್‌ಎಫ್‌ಒ ಮೋಹನ್ ಕುಮಾರ್, ಸಿಬ್ಬಂದಿ ಬಸವನಾಯಕ, ಶಿವಕುಮಾರ್, ಬಸವನಾಯಕ, ರಂಗಸ್ವಾಮಿ ಇದ್ದರು.