ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮುಕ್ತ ವಿವಿಯಿಂದ ವಾರಾಂತ್ಯ ತರಗತಿ

Mainashree
Updated On : 6 Jan 2014, 10:39 am

ಎಚ್.ಡಿ. ಕೋಟೆ: ಪಟ್ಟಣದ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಆವರಣದಲ್ಲಿ ರಾಜ್ಯ ಮುಕ್ತ ವಿವಿ ಅಧ್ಯಯನ ಕೇಂದ್ರದ ವಾರಾಂತ್ಯ ತರಗತಿಗಳು ಹಾಗೂ ಪರಿಚಯ ಕಾರ್ಯಕ್ರಮ ನಡೆಯಿತು. ಮೈಸೂರಿನ ಎಚ್.ಎಲ್. ಸತೀಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಮುಕ್ತ ವಿವಿಯು ಶಿಕ್ಷಣ ವಂಚಿತರಿಗೆ ವರದಾನವಾಗಿದೆ. ಹಲವಾರು ಕಾರಣಗಳಿಂದ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದ ಮಕ್ಕಳು, ಶಿಕ್ಷಣವನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟಿದೆ. ಇದರಿಂದ ಮಕ್ಕಳು ತಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು.ಪ್ರಾಂಶುಪಾಲ ಪ್ರಕಾಶ್ ಮಾತನಾಡಿದರು. ಸಂಸ್ಥೆಯ ಸಂಯೋಜನಾಧಿಕಾರಿ ವೆಂಕಟೇಶ್, ಜಯಪ್ರಕಾಶ್, ನಂದಿನಿ, ಉಪನ್ಯಾಸಕ ಮಲ್ಲೇಶ್, ವೀಣಾ, ಬೈರೇಗೌಡ, ರಾಮಚಂದ್ರ, ಮಹೇಂದ್ರ, ಎಂ.ಎನ್. ರವಿಶಂಕರ್, ಶಿವನಂಜು ರಾಜೇಶ್, ಸೋಮಶೇಖರ್, ಮನೋಜ್, ನಂದಿನಿ, ರಾಜಲಕ್ಷ್ಮಿ ಇದ್ದರು.   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement