ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸುದ್ದಿ ಸಂಕ್ಷೇಪ

Mainashree
Updated On : 6 Jan 2014, 10:39 am

ಸಿಟಿ ಕೋ- ಆಪ್ ಬ್ಯಾಂಕ್‌ಗೆ ಆಯ್ಕೆ
ಮೈಸೂರು: ದಿ ಸಿಟಿ ಕೋ-ಆರೇಟಿವ್ ಬ್ಯಾಂಕಿನ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಎಚ್. ಇಂದಿರಾ ವೆಂಕಟಲಿಂಗಯ್ಯ ಹಾಗೂ ಉಪಾಧ್ಯಕ್ಷರಾಗಿ ಎಂ. ಪುಟ್ಟಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಮೈಸೂರು: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ (ಕೆಎಫ್‌ಸಿಎಸ್‌ಸಿ) ಗುತ್ತಿಗೆ ಕಾರ್ಮಿಕರು ನಗರದ ಬನ್ನಿಮಂಟಪದಲ್ಲಿರುವ ನಿಗಮದ ಗೋದಾಮಿನ ಎದುರು ಸೋಮವಾರ ಪ್ರತಿಭಟಿಸಿದರು. ಪ್ರತಿ 1 ಕ್ವಿಂಟಲ್ ಆಹಾರ ಪದಾರ್ಥ ಲೋಡಿಂಗ್ ಮತ್ತು ಅನ್‌ಲೋಡಿಂಗ್‌ಗೆ 6 ಮಾತ್ರ ನೀಡಲಾಗುತ್ತಿದ್ದು, ಇದನ್ನು 18ಕ್ಕೆ ಹೆಚ್ಚಿಸಬೇಕು. ಕಾರ್ಮಿಕರಿಗೆ ಉದ್ಯೋಗ ಕಾಯಂ ಮಾಡಿ, ವಿವಿಧ ಸೌಲಭ್ಯ ಕಲ್ಪಿಸಬೇಕು. ಎಲ್ಲ ಕಾರ್ಮಿಕರಿಗೂ ಗುರುತಿನ ಚೀಟಿ ನೀಡಬೇಕು ಎಂದು ಅವರು ಒತ್ತಾಯಿಸಿದರು. ಮುಖಂಡರಾದ ಚೆಲುವರಾಜ್, ಕರಿಯಪ್ಪ ನೇತೃತ್ವ ವಹಿಸಿದ್ದರು.
ಉಚಿತ ತರಬೇತಿ
ಮೈಸೂರು: ಗುರು ರಾಘವೇಂದ್ರ ಕಂಪ್ಯೂಟರ್ ಟ್ರೈನಿಂಗ್ ಸೆಂಟರ್ ಮತ್ತು ಭಾರತೀಯ ಕಂಪ್ಯೂಟರ್ ತಂತ್ರಜ್ಞಾನ ಕೇಂದ್ರವು ಸ್ವಾಮಿ ವಿವೇಕಾನಂದರ 150ನೇ ಜನ್ಮದಿನಾಚರಣೆ ಅಂಗವಾಗಿ ನಿರುದ್ಯೋಗಿ ಯುವಕ- ಯುವತಿಯರಿಗೆ ಸ್ವ ಉದ್ಯೋಗ ಕಲ್ಪಿಸಲು ಶುಲ್ಕ ರಹಿತ ತರಬೇತಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ಜ. 7 ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಮೊ. 77602 40575 ಸಂಪರ್ಕಿಸಬಹುದು.
ಇಂದು ಪ್ರತಿಭಟನೆ
ಮೈಸೂರು: ಐಟಿಐನಲ್ಲಿ ಸೆಮಿಸ್ಟರ್ ಪದ್ಧತಿಯನ್ನು ಕೈಬಿಡಲು ಆಗ್ರಹಿಸಿ ಜ.7 ರಂದು  ಐಟಿಐ ತರಗತಿ ಬಹಿಷ್ಕರಿಸಿ, ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಐಡಿವೈಓ ಮುಖಂಡ ಟಿ.ಆರ್. ಸುನಿಲ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement