ಸುದ್ದಿ ಸಂಕ್ಷೇಪ
ನಾಳೆ ಫೋನ್ ಇನ್ ಕಾರ್ಯಕ್ರಮ
ಎಚ್.ಡಿ. ಕೋಟೆ: ತಾಪಂನಲ್ಲಿ ಜ.8ರ ಬೆಳಗ್ಗೆ 10 ರಿಂದ 11 ರವರೆಗೆ ನಡೆಯುವ ಫೋನ್ಇನ್ ಕಾರ್ಯಕ್ರಮದಲ್ಲಿ ತಾಲೂಕಿನ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲಾಗುವುದು. ಸಾರ್ವಜನಿಕರು ದೂ.08228- 255426 ಗೆ ಕರೆ ಮಾಡಿ.
ಇಂದು ಸಭೆ
ಎಚ್.ಡಿ. ಕೋಟೆ: ಪಟ್ಟಣದ ಪ.ಜಾತಿ ಹಾಗೂ ಪಂಗಡದ ಹಿತರಕ್ಷಣಾ ಸಮಿತಿ ಸಭೆಯನ್ನು ಜ.7 ರಂದು ತಾಪಂ ಸಭಾಂಗಣದಲ್ಲಿ ಶಾಸಕ ಎಸ್.ಚಿಕ್ಕಮಾದು ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ. ಸದಸ್ಯರು ಹಾಜರಾಗುವಂತೆ ಸಮಿತಿಯ ಕಾರ್ಯದರ್ಶಿಯಾದ ತಾ. ಸಮಾಜ ಕಲ್ಯಾಣಾಧಿಕಾರಿ ಬಿಂಧಿಯಾ ಕೋರಿದ್ದಾರೆ.
ಮುಸುಕಿನ ಜೋಳ ಬೆಳೆ ಕ್ಷೇತ್ರೋತ್ಸವ
ಹುಣಸೂರು: ರೈತರು ಕೃಷಿ ಇಲಾಖೆಯ ಮಾರ್ಗದರ್ಶನದಲ್ಲಿ ಸರ್ಕಾರಿ ಸವಲತ್ತುಗಳನ್ನು ಬಳಕೆ ಮಾಡಿಕೊಂಡು ತೊಡಗಿಸಿಕೊಂಡಲ್ಲಿ ಅಧಿಕ ಇಳುವರಿ ಪಡೆದು ಕೃಷಿಯನ್ನು ಒಂದು ಲಾಭದಾಯಕ ವೃತ್ತಿಯಾಗಿ ಪರಿವರ್ತಿಸಬಹುದಾಗಿದೆ ಎಂದು ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ. ಲಲಿತಾ ಜಿ.ಟಿ. ದೇವೇಗೌಡ ಸಲಹೆ ನೀಡಿದರು. ತಾಲೂಕಿನ ಹನಗೋಡು ಹೋಬಳಿ ಕರ್ಣಕುಪ್ಪೆ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಭೂ ಚೇತನ ಯೋಜನೆಯಡಿ ರೈತ ಕ್ಷೇತ್ರ ಪಾಠಶಾಲೆಯಲ್ಲಿ ಮುಸುಕಿನ ಜೋಳದ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈತರು ತಮ್ಮ ಜಮೀನುಗಳಲ್ಲಿ ಜಿಪ್ಸ್ಂ, ಜಿಂಕ್, ಬೋರಾಕ್ಸ್ ಬಳಸುವ ಮೂಲಕ ಮುಸುಕಿನ ಜೋಳದ ಬೆಳೆಯಲ್ಲಿ ಹೆಚ್ಚಿನ ಇಳುವರಿ ಜೊತೆಗೆ ಭೂಮಿಯಲ್ಲಿ ತೇವಾಂಶ ಹೆಚ್ಚಿಸುವ ಹಾಗೂ ರೋಗ ರುಜಿನಗಳು ತಡೆಯಬಹುದಾಗಿದೆ ಎಂದು ಹೇಳಿದರು.
ಸಹಾಯಕ ಕೃಷಿ ನಿರ್ದೇಶಕ ಜೆ.ವೆಂಕಟೇಶ್ ಮಾತನಾಡಿದರು. ಮೈಸೂರಿನ ಸಹಾಯಕ ಕೃಷಿ ನಿರ್ದೇಶಕ ರಂಗರಾಜನ್, ಮುಸುಕಿನ ಜೋಳದ ಬೆಳೆಯಲ್ಲಿ ಕೀಟ ಹಾಗೂ ರೋಗಗಳ ನಿರ್ವಹಣೆ ಬಗ್ಗೆ ಕೃಷಿ ಇಲಾಖೆಯಿಂದ ದೊರೆಯುವ ಕೃಷಿ ಪರಿಕರಗಳ ಬಳಕೆ ಮತ್ತು ನೀರು, ಮಣ್ಣಿನ ಸಂರಕ್ಷಣೆ ಬಗ್ಗೆ ಸಮಗ್ರ ಮಾಹಿತಿ ನೀಡಿದರು.