ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಹದಗೆಟ್ಟಿದ್ದ ರಸ್ತೆ ದುರಸ್ತಿ ಮಾಡಿದ ಗ್ರಾಮಸ್ಥರು

Mainashree
Updated On : 6 Jan 2014, 10:40 am

ಕೆ.ಆರ್. ನಗರ: ತಾಲೂಕಿನ ಹೊಸೂರು ವಿನಾಯಕ ಆಟೋ ಚಾಲಕರ ಸಂಘದ ಸದಸ್ಯರು ಹದಗೆಟ್ಟ ರಸ್ತೆಯ ದುರಸ್ತಿಯನ್ನು ತಾವೇ ಮಾಡಿದ್ದಾರೆ.
ಕೆ.ಆರ್. ನಗರ- ರಾಮನಾಥಪುರ ಮುಖ್ಯರಸ್ತೆಯಿಂದ ಹೊಸೂರು ಹೊಸಕೋಟೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟು ಗುಂಡಿಗಳು ಬಿದ್ದು ವಾಹನ ಸಂಚಾರಕ್ಕೆ ಮತ್ತು ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿತ್ತು. ಈ ಬಗ್ಗೆ  ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ.
ರಸ್ತೆ ಹಾಳಾಗಿ ಹೋಗುತ್ತಿರುವುದನ್ನು ಕಂಡ ಹೊಸೂರಿನ ವಿನಾಯಕ ಆಟೋ ಚಾಲಕರ ಸಂಘದ ಅಧ್ಯಕ್ಷ ಎಚ್.ಟಿ. ಪ್ರಮೋದ್, ಉಪಾಧ್ಯಕ್ಷ ಮಂಜು, ಖಜಾಂಜಿ ಸಂತೋಷ್, ಕಾರ್ಯದರ್ಶಿ ಜವೀದ್‌ಪಾಷ ನೇತೃತ್ವದಲ್ಲಿ ಸಂಘದ ಸದಸ್ಯರು ಸುಮಾರು 8 ಕಿ.ಮೀ. ದೂರವಿರುವ ಈ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಿಗೆ ಕಲ್ಲು ಮತ್ತು ಮಣ್ಣನ್ನು ಹಾಕುವ ಮೂಲಕ ಹದಗೆಟ್ಟಿರುವ ರಸ್ತೆಗೆ ತಾತ್ಕಾಲಿಕ ತೇಪೆಯಾಕುವ ಕೆಲಸ ಮಾಡಿದರು. ಸಂಘದ ಸದಸ್ಯರಾದ ನವೀನ, ಮಧು, ರಾಮ, ರವಿ, ಲೋಕೇಶ್, ಮಂಜು, ಶಾಹಿದ್, ಮಂಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement