ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಾಂಗ್ರೆಸ್ ಗೆಲ್ಲಿಸಲು ಹುಮ್ಮಸ್ಸಿಂದ ಓಡಾಡಿ

Vishwanath S
Updated On : 8 Jan 2014, 12:56 pm

ಮೈಸೂರು: ದೇಶದಲ್ಲಿ ಸರ್ವ ಜನಾಂಗವನ್ನು ಒಟ್ಟಿಗೆ ಕೊಂಡೊಯ್ಯುವ ಶಕ್ತಿ ಇರುವುದು ಕಾಂಗ್ರೆಸ್‌ಗೆ ಮಾತ್ರ ಎಂದು ಶಾಸಕ ಎಂ.ಕೆ. ಸೋಮಶೇಖರ್ ಹೇಳಿದರು.
ಮಂಗಳವಾರ ನಗರದ ಕಾಳೇಗೌಡ ಭವನದಲ್ಲಿ ನಡೆದ ಕೃಷ್ಣರಾಜ ಬ್ಲಾಕ್ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಡವರ, ರೈತರ ಪರ ಕೆಲಸ ಮಾಡುತ್ತಿರುವ ಕಾಂಗ್ರೆಸ್‌ಗೆ ಕಾರ್ಯಕರ್ತರೆ ಆಸ್ತಿ. ಈಗ ಮತ್ತೊಮ್ಮೆ ಅಗ್ನಿ ಪರೀಕ್ಷೆ ಎದುರಾಗಿದ್ದು ಕಾರ್ಯಕರ್ತರು ಹುಮ್ಮಸ್ಸಿನಿಂದ ಓಡಾಡಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಪಡಬೇಕಿದೆ ಎಂದರು.
ಕೋಮುವಾದ ಹಿನ್ನೆಲೆಯುಳ್ಳ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಬಾರದು. ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡದಂತೆ ಗುಜರಾತ್‌ನಲ್ಲಿ ಗೋಧ್ರೋತ್ತರ ಹತ್ಯಾಕಾಂಡ ನಡೆಯಿತು. ಅಂತಹ ಘಟನೆಗೆ ಕಾರಣರಾದ ಮೋದಿ ಪಿಎಂ ಆಗಲು ಅರ್ಹರಿಲ್ಲ. ಮಹಾತ್ಮ ಗಾಂಧಿಯನ್ನೇ ಕೊಂದ ಆರ್‌ಎಸ್‌ಎಸ್‌ನವರ ಬಗ್ಗೆ ಜನ ಎಚ್ಚರವಾಗಿರಬೇಕು ಎಂದರು.
ಕೃಷ್ಣರಾಜ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಸೋಮಶೇಖರ್, ಮಾಜಿ ಮೇಯರ್ ಟಿ.ಬಿ. ಚಿಕ್ಕಣ್ಣ, ನಾರಾಯಣ, ಮುಖಂಡರಾದ ರವಿಶಂಕರ್, ಕೆ.ಆರ್. ಮೋಹನ್‌ಕುಮಾರ್, ಎಂ.ಎಸ್. ಸತ್ಯನಾರಾಯಣ, ಬ್ಯಾಂಕ್ ಪುಟ್ಟಸ್ವಾಮಿ, ಶಿವಮಾದು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement