ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮೃತಪಟ್ಟವನ ಕುಟುಂಬಕ್ಕೆಪರಿಹಾರದ ಚೆಕ್ ವಿತರಣೆ

Vishwanath S
Updated On : 8 Jan 2014, 12:56 pm

ಟಿ. ನರಸೀಪುರ: ತಾಲೂಕಿನ ಕೊತ್ತೇಗಾಲ ಗ್ರಾಮದಲ್ಲಿ ಜೀತದಾಳು ಶಿವಕುಮಾರ ಆತ್ಮಹತ್ಯೆ ಹಿನ್ನೆಲೆ, ಪರಿಹಾರ ನೀಡುವಂತೆ ದಸಂಸ ನಡೆಸಿದ ಆಹೋರಾತ್ರಿ ಪ್ರತಿಭಟನಾ ಧರಣಿಗೆ ಮಣಿದ ಜಿಲ್ಲಾಡಳಿತ 1.80 ಲಕ್ಷ ಪರಿಹಾರ ನೀಡಿದೆ.
ತಾಲೂಕು ಕಚೇರಿ ಆವರಣಕ್ಕೆ ಸೋಮವಾರ ರಾತ್ರಿಯೇ ಮೃತ ಶಿವಕುಮಾರನ ಶವದೊಂದಿಗೆ ಆಗಮಿಸಿದ ದಸಂಸ ಕಾರ್ಯಕರ್ತರು, ಕೊತ್ತೇಗಾಲ ಗ್ರಾಮಸ್ಥರು ಹಾಗೂ ಮೃತನ ಸಂಬಂಧಿಕರು ಆರೋಪಿ ಸುಬ್ಬಣ್ಣನನ್ನು ಬಂಧಿಸಿ, ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ, ರಾತ್ರಿಯಿಡಿ ಪ್ರತಿಭಟನಾ ಧರಣಿ ನಡೆಸಿ, ಮಂಗಳವಾರ ತಾ. ಕಚೇರಿಗೆ ಸಾರ್ವಜನಿರು ಹಾಗೂ ಸಿಬ್ಬಂದಿ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು.
ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಉಪವಿಭಾಗಾಧಿಕಾರಿ ಬಸವರಾಜು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಒಂದು ಲಕ್ಷ ರು. ಗಳ ಪರಿಹಾರ ಚೆಕ್ ಅನ್ನು ವಿತರಿಸಿದರು. ಅಲ್ಲದೆ ರಾಷ್ಟ್ರೀಯ ಭದ್ರತಾ ಯೋಜನೆಯಡಿ ಶವ ಸಂಸ್ಕಾರಕ್ಕೆ 20 ಸಾವಿರ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 60 ಸಾವಿರ ರು.ಗಳ ನೆರವು ನೀಡಲಾಯಿತು. ಆರೋಪಿ ಸುಬ್ಬಣ್ಣನನ್ನು ಕೂಡಲೇ ಬಂಧಿಸಿ, ಕಾನೂನಿನಡಿ ಶಿಕ್ಷೆ ನೀಡಲಾಗುವುದು ಎಂಬ ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement