ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸರ್ಕಾರಿ ಕಚೇರಿ ಕಾಂಗ್ರೆಸ್ ಕಚೇರಿಗಳಾಗಿವೆ: ಟೀಕೆ

Vishwanath S
Updated On : 8 Jan 2014, 12:56 pm

ನಂಜನಗೂಡು: ತಾಲೂಕಿನ ಸರ್ಕಾರಿ ಕಚೇರಿಗಳು ಕಾಂಗ್ರೆಸ್ ಪಕ್ಷದ ಕಚೇರಿಗಳಾಗಿ ಮಾರ್ಪಟ್ಟಿದ್ದು ಅಧಿಕಾರಿಗಳು ಕಾಂಗ್ರೆಸ್ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳಿಗೆ ಇದರ ಅರಿವೇ ಇಲ್ಲದಂತಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಪ್ರತಿಭಟನೆ ನಡೆಸುವುದಾಗಿ ಕೆಜೆಪಿ ಮುಖಂಡ ಎಸ್.ಮಹದೇವಯ್ಯ ಎಚ್ಚರಿಸಿದರು.
ಶ್ರಾವಣ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಕೆಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಹೋಳಾದ ಸನ್ನಿವೇಶದ ಲಾಭ ಪಡೆದು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸುವಂತಾಯಿತು. ಆ ಪಕ್ಷದ ಮುಖಂಡರು ಸರ್ಕಾರಿ ಎಜೆಂಟರಂತೆ ವರ್ತಿಸುತ್ತಿದ್ದಾರೆ. ಕೆಜೆಪಿ ಬೆಂಬಲಿತ ಮುಖಂಡರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಕಾರ್ಯಕರ್ತರ ಮೇಲೆ ಸುಳ್ಳು ಕೇಸುಗಳು ದಾಖಲಾಗುತ್ತಿವೆ. ಕಾಣದ ಕೈಗಳು ಆಡಳಿತಯಂತ್ರ ನಡೆಸುತ್ತಿವೆ. ತಾಲೂಕಿನ ಅಭಿವೃದ್ಧಿಗೆ ಶಾಸಕರು ಶ್ರಮಿಸುತ್ತಿಲ್ಲ ಎಂದು ದೂರಿದ ಅವರು, ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ದಬ್ಬಾಳಿಕೆ ತಡೆಗಟ್ಟುವಂತೆ ಸಚಿವರ ವಿ.ಶ್ರೀನಿವಾಸಪ್ರಸಾದ್ ಅವರನ್ನು ಆಗ್ರಹಿಸಿದರು.
ಆತಂಕ ಬೇಡ: ಕೆಜೆಪಿ ಕಟ್ಟಿ ಕಡಿಮೆ ಅವಧಿಯಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂಪ್ಪನವರ ನಾಯಕತ್ವದ ಅವಶ್ಯಕತೆ ಬಿಜೆಪಿಗೆ ಮನವರಿಕೆಯಾಗಿದೆ. ನಾವೆಲ್ಲರೂ ಬಿಜೆಪಿ ಪಕ್ಷ ಸೇರಿ ಸಂಘಟಿಸೋಣ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸೋಣ. ಜ. 20 ರಂದು ದಾವಣಗೆರೆಯಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುವ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಜಿಪಂ ಸದಸ್ಯ ಎಸ್.ಎಂ.ಕೆಂಪಣ್ಣ ಮಾತನಾಡಿದರು.
ಪುರಸಭಾ ಸದಸ್ಯರಾದ ಪ್ರದೀಪ್, ಸುಧಾ ಮಹೇಶ್, ಮೀನಾವಿನಯ್, ಚಿನ್ನದಗುಡಿ ಹುಂಡಿ ಸುರೇಶ್, ಆಕಳ ಮಹದೇವಪ್ಪ, ಮರಿಸ್ವಾಮಿ, ಸ್ವಾಮಿ, ಇಲಿಯಾಸ್ ಅಹಮದ್, ಎನ್.ಸಿ ಬಸವಣ್ಣ, ಮಂಜುಪಟೇಲ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement