ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಹಿರಿಯರ ಬಗ್ಗೆ ಕಡಿಮೆಯಾಗುತ್ತಿರುವ ಗೌರವ

Vishwanath S
Updated On : 8 Jan 2014, 12:56 pm

ನಂಜನಗೂಡು: ಹಿಂದಿನ ಆಚಾರ ವಿಚಾರ, ಗುರು ಹಿರಿಯರಿಗೆ ನೀಡುತ್ತಿದ್ದ ಗೌರವ ಭಾವನೆಗಳು ಇತ್ತೀಚಿನ ದಿನಗಳಲ್ಲಿ ನಶಿಸಿ ಹೋಗುತ್ತಿವೆ ಎಂದು ಸಾಹಿತಿ ಪ್ರೊ.ಮಲೆಯೂರು ಗುರುಸ್ವಾಮಿ ವಿಷಾದಿಸಿದರು.
ತಾಲೂಕಿನ ಆಕಲ ಗ್ರಾಮದಲ್ಲಿ ಹುಲ್ಲಹಳ್ಳಿ ಜೆಎಸ್‌ಎಸ್ ಸಂಯುಕ್ತ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದಲ್ಲಿ ಸೇವಾನಿಷ್ಠೆ- ವಚನಕಾರರು ಎಂಬ ವಿಚಾರ ಕುರಿತ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ತಾಲೂಕಿನ ಮಹನೀಯರಾದ ದೇವನೂರು ಸಿದ್ದಯ್ಯ, ಪಿ.ವಿ. ಪಂಡಿತ್, ತಗಡೂರು ಸುಬ್ಬಣ್ಣ, ಕೂಡ್ಲಾಪುರ ತೋಟಪ್ಪ, ಸಿ. ಪೆರುಮಾಳ್ ಚಟ್ಟಿಯಾರ್, ಸಿಕೆಎನ್ ರಾಜ ಮುಂತಾದವರ ನಡೆ ನುಡಿ, ಜೀವನ ಕುರಿತಂತೆ ಅವರಾಡಿದ ಮಾತು ಮನೋಜ್ಞವಾಗಿತ್ತು.
ಚಾಮರಾಜನಗರ ಜಿಪಂ ಮಾಜಿ ಅಧ್ಯಕ್ಷ ಎಸ್. ಮಹದೇವಯ್ಯ ಶಿಬಿರ ಉದ್ಘಾಟಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಗ್ರಾಮಸ್ಥರೇ ಗ್ರಾಮ ಮತ್ತು ಪ್ರತಿ ಮನೆಯು ಆರೋಗ್ಯದ ಕಡೆ ಗಮನಕೊಡಬೇಕು ಎಂದು ತಿಳಿಸಿದರು. ಡಿವೈಎಸ್ಪಿ ಡಾ.ರಾಜ ಅಧ್ಯಕ್ಷತೆ ವಹಿಸಿ ಮಾತನಾಡಿದರು. 21 ವಿದ್ಯಾರ್ಥಿನಿಯರು 39 ವಿದ್ಯಾರ್ಥಿಗಳು ಕಾಲೇಜಿನ ಸಿಬ್ಬಂದಿವರ್ಗ ಗ್ರಾಮದ ಸ್ವಚ್ಛತಾ ಕಾರ್ಯ ನಡೆಸಿದರು. ಜಿಪಂ ಸದಸ್ಯರಾದ ಚಿಕ್ಕರಂಗನಾಯ್ಕ, ಕೆಂಪಣ್ಣ, ಮುಖಂಡರಾದ ಆಲನಹಳ್ಳಿ ಪುಟ್ಟಸ್ವಾಮಿ, ಎ.ಟಿ. ಕುಮಾರ್, ಆಕಲ ಮಹದೇವಪ್ಪ, ಶಿಬಿರಾಧಿಕಾರಿ ಮತ್ತು ಉಪನ್ಯಾಸಕ ಎಂ.ಪಿ. ರೇವಣ್ಣ, ಪುಟ್ಟಮಾದಪ್ಪ, ಮತ್ತು ಗ್ರಾಪಂ ಸದಸ್ಯರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement