ಅತ್ಯಾಧುನಿಕ ತಂತ್ರಜ್ಞಾನದ ಹೋಂಡಾ ಸಿಟಿ ಕಾರು ಮಾರುಕಟ್ಟೆಗೆ ಬಿಡುಗಡೆ
ಮೈಸೂರು: ಇನ್ಸ್ಪೈರಿಂಗ್ ಹೋಂಡಾ ಸಂಸ್ಥೆಯು ನಾಲ್ಕನೆ ತಲೆಮಾರಿನ ಹೋಂಡಾ ಸಿಟಿ ಕಾರನ್ನು ಬುಧವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಪ್ರಸ್ತುತ ಜಾಗತಿಕ ಮಾರುಕಟ್ಟೆಯಲ್ಲಿ ಉತ್ತಮ ತಂತ್ರಜ್ಞಾನ, ಅತ್ಯುತ್ತಮ ವಿನ್ಯಾಸ, ಇಂಧನ ಉಳಿತಾಯ ಹಾಗೂ ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ಈ ಕಾರನ್ನು ರೂಪಿಸಲಾಗಿದೆ. ಡೀಸೆಲ್ ಮತ್ತು ಪೆಟ್ರೋಲ್ನಿಂದ ಚಲಿಸುವ ಎರಡೂ ವಿಧದ ಕಾರನ್ನೂ ಮಾರುಕಟ್ಟೆಗೆ ಒಮ್ಮೆಲೆ ಬಿಟ್ಟಿರುವುದು ವಿಶೇಷ.
ಹೋಂಡಾ ಸಿಟಿ 55 ದೇಶಗಳಲ್ಲಿ 2.2 ದಶಲಕ್ಷ ಗ್ರಾಹಕರನ್ನು ಹೊಂದಿದೆ. ನಾಲ್ಕನೇ ತಲೆಮಾರಿನ ಈ ಕಾರಿಗೆ ಭಾರತೀಯ ಗ್ರಾಹಕರಿಂದ ದೊಡ್ಡ ಪ್ರತಿಕ್ರಿಯೆ ಲಭಿಸಿದೆ. ಈ ಕಾರು ಸಂಪೂರ್ಣವಾಗಿ ಹೊಸ ವಿನ್ಯಾಸ, ಸುರಕ್ಷತೆಯ ಆರಾಮ ನೀಡುತ್ತದೆ. ಹೆಚ್ಚಿನ ಬ್ಯಾಲೆನ್ಸ್ ಆಧಾರ ವ್ಯವಸ್ಥೆ ಹೊಂದಿದೆ. ಭಾರತೀಯ ಬಳಕೆಯ ಸನ್ನಿವೇಶ ಪರಿಗಣಿಸಿ ರೂಪಿಸಲಾಗಿದೆ.
ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಹೋಂಡಾ ಸಿಟಿ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದರು. ಇನ್ಸ್ಪೈರಿಂಗ್ ಹೋಂಡಾದ ವ್ಯವಸ್ಥಾಪಕ ನಿರ್ದೇಶಕ ಬಿಪಿನ್ ಷಾ, ನಿರ್ದೇಶಕರಾದ ಕಿರಣ್ ಷಾ, ಹಿತೇಶ್ ಷಾ, ಕೆ. ಸುಕೀರ್ತಿ, ಮಯೂರ್ ಷಾ ಇದ್ದರು.