ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಆಟೋ ಗ್ಯಾಸ್ ಟ್ರಬಲ್ ಖಂಡಿಸಿ ಪ್ರತಿಭಟನೆ

Vishwanath S
Updated On : 9 Jan 2014, 1:20 am

ಮೈಸೂರು: ಅಡುಗೆ ಅನಿಲ (ಗ್ಯಾಸ್) ದರ ಏರಿಕೆ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾದವರು ನಗರದ ಮೂರು ಕಡೆಗಳಲ್ಲಿ ಬುಧವಾರ ವಿವಿಧ ರೀತಿಯ ಪ್ರತಿಭಟನೆ ಹಮ್ಮಿಕೊಂಡಿದ್ದರು.
ಕೆ.ಆರ್. ಕ್ಷೇತ್ರದ ಕಾರ್ಯಕರ್ತರು ಆರ್‌ಟಿಒ ವೃತ್ತದಲ್ಲಿ, ಎನ್.ಆರ್. ಕ್ಷೇತ್ರದ ಕಾರ್ಯಕರ್ತರು ಎಫ್‌ಟಿಎಸ್ ವೃತ್ತದಲ್ಲಿ ಹಾಗೂ ಚಾಮರಾಜ ಕ್ಷೇತ್ರದವರು ಗಾಂಧಿಚೌಕದಲ್ಲಿ ಪ್ರತಿಭಟಿಸಿದರು.
ಅಡುಗೆ ಅನಿಲ ಹಾಗೂ ಆಟೋಗಳಿಗೆ ವಿತರಿಸುವ ಅನಿಲ ಬೆಲೆ ಏರಿಸಿರುವುದು ಖಂಡನಿಯ. ಈಗಾಗಲೇ ಹಲವು ಬಾರಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಏರಿಸಿರುವುದರಿಂದ ಮಧ್ಯಮ ಮತ್ತು ಬಡ ವರ್ಗದವರು ಬದುಕು ಅತ್ರಂತವಾಗುತ್ತಿದೆ. ಕೇಂದ್ರ ಸರ್ಕಾರವು ಬೆಲೆ ಏರಿಕೆಯನ್ನು ಹಿಂಪಡೆಯಬೇಕು. ರಾಷ್ಟ್ರಪತಿಯವರು ಮಧ್ಯಪ್ರವೇಶಿಸಿ ಸಾಮಾನ್ಯ ಜನರ ಸಮಸ್ಯೆ ಪರಿಹಾರಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಆರ್‌ಟಿಒ ವೃತ್ತದ ಬಳಿ ಪ್ರತಿಭಟಿಸಿದ ಕಾರ್ಯಕರ್ತರು ದ್ವಿಚಕ್ರವಾಹನದ ಅಣಕು ಶವಯಾತ್ರೆ, ಗಾಂಧಿ ಚೌಕದಲ್ಲಿ ಪ್ರತಿಭಟಿಸಿದವರು ಸಿಲಿಂಡರ್ ಅಣಕು ಶವಯಾತ್ರೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಎಫ್‌ಟಿಎಸ್ ವೃತ್ತದಲ್ಲಿ ಸೌದೆ ಒಲೆಯಲ್ಲಿ ಅಡುಗೆ ತಯಾರಿಸಿ ಅಡುಗೆ ಅನಿಲ ದರ ಏರಿಕೆ ವಿರುದ್ಧ ಕಿಡಿಕಾರಿದರು.
ಬಿಜೆಪಿ ನಗರಾಧ್ಯಕ್ಷ ಈ. ಮಾರುತಿರಾವ್ ಪವಾರ್, ಮಹಿಳಾ ಮೋರ್ಚಾ ನಗರಾಧ್ಯಕ್ಷೆ ಟಿ.ಎನ್. ಶಾಂತ, ಮಾಜಿ ಸಚಿವ ಎಸ್.ಎ. ರಾಮದಾಸ್, ಎಂಡಿಎ ಮಾಜಿ ಅಧ್ಯಕ್ಷ ಎಲ್. ನಾಗೇಂದ್ರ, ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಪಿ. ಮಂಜುನಾಥ್, ನಗರಪಾಲಿಕೆ ಸದಸ್ಯರಾದ ಮ.ವಿ. ರಾಮಪ್ರಸಾದ್, ಸ್ನೇಕ್ ಶ್ಯಾಮ್, ಜಗದೀಶ್, ಮಹದೇವಮ್ಮ, ಮುಖಂಡರಾದ ಎ.ವಿ. ವಿದ್ಯಾ, ನೂರ್ ಫಾತಿಮಾ, ಮಂಜುಳ, ಆರ್. ನಾಗರಾಜ್, ಜಯಶಂಕರ್, ಸುರೇಶ್, ಮಲ್ಲಪ್ಪಗೌಡ, ವಿ. ಸೋಮಸುಂದರ, ಜೋಗಿ ಮಂಜುನಾಥ್, ಶಿಂಧೆ, ದಿನೇಶ್, ವನಜಾ ಭೀಮಯ್ಯ, ಜಗದೀಶ್, ಶಂಕರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement