ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಾರ್ಮಿಕರಿಂದ ದೇಶದ ಗೌರವ ಹೆಚ್ಚಳ: ನರಸಿಂಹನ್

Vishwanath S
Updated On : 9 Jan 2014, 1:19 am

ಮೈಸೂರು: ಕಾರ್ಮಿಕ ವರ್ಗದಿಂದ ದೇಶದ ಗೌರವ ಹೆಚ್ಚುತ್ತಿದೆ ಎಂದು ಎಐಟಿಯುಸಿ ರಾಜ್ಯ ಸಮಿತಿ ಅಧ್ಯಕ್ಷ ಎಂ.ಸಿ. ನರಸಿಂಹನ್ ಹೇಳಿದರು.
ಸರಸ್ವತಿಪುರಂ 2ನೇ ಮುಖ್ಯರಸ್ತೆಯಲ್ಲಿ ಎಪಿಐ ಮತ್ತು ಐಟಿಯುಸಿ ಸಂಘಟನೆಯು ದಿವಂಗತ ಕೆ. ವೆಂಕಟರಾಮಯ್ಯ ಅವರ ಸ್ಮರಣಾರ್ಥ ನಿರ್ಮಿಸಿರುವ ಕೆ.ವಿ. ಭವನ ಉದ್ಘಾಟಿಸಿ ಅವರು ಮಾತನಾಡಿದರು.
ದುಡಿಯುವ ವರ್ಗದಿಂದ ದೇಶದ ಗೌರವ ಹೆಚ್ಚುತ್ತಿದೆ. ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತಿರುವ ಕಾರ್ಮಿಕ ವರ್ಗವನ್ನು ನಾವು ಗೌರವಿಸಬೇಕು. ಯಾವುದೆ ರೀತಿಯ ಸ್ವಾರ್ಥದಿಂದ ಕೆಲಸ ಮಾಡದ ಕಾರ್ಮಿಕ ವರ್ಗದ ಕಡೆಗಣನೆ ಸಲ್ಲದು. ಕೆ.ವಿ. ಭವನ ನಿರ್ಮಾಣಕ್ಕೆ ಕಾರ್ಮಿಕ ವರ್ಗ ನೀಡಿದ ಕೊಡುಗೆ ಕೇಳಿ ತುಂಬಾ ಸಂತೋಷವಾಗಿದೆ ಎಂದರು. ಮೌಲ್ಯಗಳು ಬದಲಾಗಿ ನಿರೀಕ್ಷೆಯಿಂದ ಸೇವೆ ಸಲ್ಲಿಸುವವರ ನಡುವೆ ಯಾವುದೆ ನಿರೀಕ್ಷೆ ಇಲ್ಲದೆ, ನಿಸ್ವಾರ್ಥದಿಂದ ಕೊಡುಗೆ ನೀಡಿದ ಕಾರ್ಮಿಕರು ನಿಜಕ್ಕೂ ಅಭಿನಂದನಾರ್ಹರು ಎಂದು ಹೇಳಿದರು. ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಡಾ. ಸಿದ್ದನಗೌಡ ಪಾಟೀಲ್, ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಎಚ್.ವಿ. ಅನಂತ ಸುಬ್ಬರಾವ್, ಕಾರ್ಯದರ್ಶಿ ಪಿ.ವಿ. ಲೋಕೇಶ್ ಮಾತನಾಡಿದರು.
ರಾಜ್ಯ ಸಮಿತಿ ಕಾರ್ಯಾಧ್ಯಕ್ಷ ಎಚ್.ಕೆ. ರಾಮಚಂದ್ರಪ್ಪ, ಕಾರ್ಯದರ್ಶಿ ಶಿವಣ್ಣ, ವಿಜಯಭಾಸ್ಕರ್, ಬಾಬು, ಜಿಲ್ಲಾ ಅಧ್ಯಕ್ಷ ರಾಜು ಮತ್ತು ಸಿಪಿಐ ಜಿಲ್ಲಾ ಮಂಡಳಿ ಕಾರ್ಯದರ್ಶಿ ಎಚ್.ಆರ್. ಶೇಷಾದ್ರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement