'ಹಿರಿಯರು ಆಹಾರ ಕ್ರಮ ಅನುಸರಿಸಲಿ'
ಮೈಸೂರು: ಹಿರಿಯ ನಾಗರಿಕರು ತಪ್ಪದೆ ಆಹಾರ ಕ್ರಮ ಅನುಸರಿಸಬೇಕು ಎಂದು ಕೇಂದ್ರೀಯ ಆಹಾರ ಮತ್ತು ತಾಂತ್ರಿಕ ಸಂಶೋಧನಾಲಯದ ನಿವೃತ್ತ ವಿಜ್ಞಾನಿಪ್ರೊ.ಆರ್.ವೈ. ವಾಸುದೇವ ಹೇಳಿದರು.
ಹಿರಿಯ ನಾಗರಿಕ ಮಂಡಳಿ ಹಾಗೂ ಹಿರಿಯ ನಾಗರಿಕ ಪರಿಷತ್ ಸಂಯುಕ್ತಾಶ್ರಯದಲ್ಲಿ ಜಯಲಕ್ಷ್ಮೀಪುರಂನ ಸಂಸ್ಥೆಯ ಸರಸ್ವತಿ ಸಮುದಾಯ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಆಹಾರ ಮತುಜೀವನಕ್ರಮ ಎಂಬ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.
ವಯಸ್ಸಾದ ಮೇಲೆ ಜೀರ್ಣಶಕ್ತಿ ಕಡಿಮೆ ಆಗುವ ಸಂಭವ ಹೆಚ್ಚಾಗಿರುವುದರಿಂದ ಮಿತ ಆಹಾರ ಸೇವನೆ ಅತ್ಯಗತ್ಯ. ಅದರಲ್ಲೂ ಪೌಷ್ಟಿಕಾಂಶ ಅಧಿಕವಿರುವ ಆಹಾರ ಸೇವಿಸಬೇಕು. ಹಣ್ಣು, ತರಕಾರಿ ಹಾಗೂ ಸೊಪ್ಪು ತಪ್ಪದೆ ಉಪಯೋಗಿಸುವುದರಿಂದ ಆರೋಗ್ಯ ಸುಧಾರಿಸಲಿದೆ ಎಂದರು.
ಆಹಾರದ ಬಗ್ಗೆ ಎಚ್ಚರಿಕೆ ವಹಿಸುವಂತೆ, ವಿಹಾರ ಮತ್ತು ಸೂಕ್ತ ವ್ಯಾಯಾಮಗಳ ಅನುಸರಿಸಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಹಿರಿಯ ನಾಗರಿಕರು ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು. ಮಂಡಳಿ ಅಧ್ಯಕ್ಷ ಡಾ.ಎಚ್.ಎಂ.ನಾಗರಾಜು, ಪರಿಷತ್ ಅಧ್ಯಕ್ಷ ಎಸ್.ವಿ. ಗೌಡಪ್ಪ ಇದ್ದರು.