2.70 ಕೋಟಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಮೈಸೂರು: ನಗರ ಪಾಲಿಕೆ ವಾರ್ಡ್ ನಂ.1ರ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗೆ ಶಾಸಕ ಎಂ.ಕೆ. ಸೋಮಶೇಖರ್ ಮತ್ತು ಪಾಲಿಕೆ ಸದಸ್ಯ ಬಿ.ವಿ. ಮಂಜುನಾಥ್ ಚಾಲನೆ ನೀಡಿದರು.
ನಗರ ಪಾಲಿಕೆಯು ಮುಖ್ಯಮಂತ್ರಿಗಳ 100 ಕೋಟಿ ಅನುದಾನದಡಿ ವಾರ್ಡ್ ನಂ.1ರ ದೇವಾಂಬ ಅಗ್ರಹಾರದಲ್ಲಿ 35 ಲಕ್ಷ ವೆಚ್ಚದಲ್ಲಿ ಕಲ್ವರ್ಟ್ ನಿರ್ಮಿಸುವುದು, ಸುಬ್ಬರಾಯನ ಕೆರೆ ಚರಂಡಿ ಸರಪಳಿ 950 ಮೀ.ನಿಂದ 1075 ಮೀಟರ್‌ವರೆಗೆ ಪುನರ್ ನವೀಕರಿಸುವ ಕಾಮಗಾರಿಯನ್ನು 50 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗಿದೆ. 15 ಲಕ್ಷ ವೆಚ್ಚದಲ್ಲಿ ಅಗ್ರಹಾರ ರಸ್ತೆಯಲ್ಲಿ ಕಲ್ವರ್ಟ್ ನಿರ್ಮಿಸುವುದು, 35 ಲಕ್ಷ ವೆಚ್ಚದಲ್ಲಿ ರಾಮಾನುಜ ರಸ್ತೆಯಲ್ಲಿ ಕಲ್ವರ್ಟ್ ನಿರ್ಮಿಸುವುದು, 55 ಲಕ್ಷ ವೆಚ್ಚದಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠದ ಹಿಂಭಾಗ ಕಲ್ವರ್ಟ್ ನಿರ್ಮಿಸುವುದು, ವಿಶ್ವಮಾನವ ಉದ್ಯಾನ ಬಳಿ 40 ಲಕ್ಷ ವೆಚ್ಚದಲ್ಲಿ ಕಲ್ವರ್ಟ್ ನಿರ್ಮಾಣ ಮತ್ತು 40 ಲಕ್ಷ ವೆಚ್ಚದಲ್ಲಿ ಚಾಮರಾಜ ಜೋಡಿ ರಸ್ತೆಯಿಂದ ಅಗ್ರಹಾರ ರಸ್ತೆವರೆಗೆ ಪುನರ್ ನವೀಕರಣ ಕಾಮಗಾರಿ ಕೈಗೊಳ್ಳಲಾಗಿದೆ.
ಈ ವೇಳೆ ಪಾಲಿಕೆ ಸದಸ್ಯ ಬಿ.ವಿ. ಮಂಜುನಾಥ್, ವಲಯ ಕಚೇರಿ 1ರ ಸಹಾಯಕ ಆಯುಕ್ತ ಜಗದೀಶ್, ಎಸ್‌ಇ ಕೃಷ್ಣ, ಜೆಇ ವಾಸುದೇವ್, ಸೋಮಶೇಖರ್, ಅರುಣ್‌ಕುಮಾರ್, ವಾದಿರಾಜ್ ಬಲ್ಲಾಳ್, ಜಗದೀಶ್, ಎಸ್.ಬಿ. ಪರಶಿವಮೂರ್ತಿ, ರಾಜೇಶ್, ಶಿವರಾಜ್, ಗುತ್ತಿಗೆದಾರ ವೆಂಕಟಸುಬ್ಬಯ್ಯ, ಸೋಗಾನಂದ, ಧನಂಜಯ ಇದ್ದರು.