ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅಮರಶಿಲ್ಪಿ ಬಗ್ಗೆ ಅಪಪ್ರಚಾರ ಸಲ್ಲದು

Vishwanath S
Updated On : 10 Jan 2014, 12:54 pm

ಮೈಸೂರು: ಅಮರಶಿಲ್ಪಿ ಜಕಣಾಚಾರಿ ಬಗ್ಗೆ ಅಪಪ್ರಚಾರ ಸಲ್ಲದು ಎಂದು ಯೋಗಾನರಸಿಂಹಸ್ವಾವು ದೇವಸ್ಥಾನದ ಸಂಸ್ಥಾಪಕ ಪ್ರೊ.ಭಾಷ್ಯಂ ಹೇಳಿದರು.
ಅಮರಶಿಲ್ಪಿ ವೇದಿಕೆಯು ವಿಜಯನಗರ ಯೋಗಾನರಸಿಂಹಸ್ವಾವು ದೇವಸ್ಥಾನದಲ್ಲಿ ಗುರುವಾರ ಏರ್ಪಡಿಸಿದ್ದ ವೇದಿಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದ ನಾನಾ ದೇವಾಲಯಗಳಲ್ಲಿ ಅಮರಶಿಲ್ಪಿ ಜಕಣಾಚಾರಿ ಅವರ ಶಿಲ್ಪಗಳನ್ನು ಕಾಣಬಹುದು. ಹೀಗಿರುವಾಗ ಆ ಶಿಲ್ಪಿಯೇ ಇರಲಿಲ್ಲ ಎಂಬ ಅನುಮಾನ ವ್ಯಕ್ತಪಡಿಸಿರುವುದು ಸರಿಯಲ್ಲ. ಅವರು ಬಿಟ್ಟು ಹೋಗಿರುವ ಶಿಲ್ಪಕಲೆಗಳೇ ಅವರು ಬದುಕಿದ್ದರೂ ಎಂಬುದಕ್ಕೆ  ಸಾಕ್ಷಿ ಎಂದರು.
ವೇದಿಕೆ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಮು, ಅಮರಶಿಲ್ಪಿ ಜಕಣಾಚಾರಿ ಅವರು ಶಿಲ್ಪಕಲೆಯೇ ಮೂಲಕ ಭಾರತದ ಸಂಸ್ಕೃತಿ ಕಟ್ಟಿದರು. ಆ ಮೂಲಕ ವಿಶ್ವದಲ್ಲಿ ದೇಶದ ಕೀರ್ತಿ ಬೆಳಗಿಸಿದರು. ಕಾಯಕ ಸಮಾಜ ಸಂಘಟನೆ ಮುಖೇನ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.
ನಿಷೇಧಿಸಲಿ: ಬೆಂಗಳೂರಿನಲ್ಲಿ ಜ.15 ರಂದು ಬೆನ್ನಿ ಹಿನ್ ಕಾರ್ಯಕ್ರಮ ಆಯೋಜಿಸಿದ್ದು, ಇದೊಂದು ಮೌಢ್ಯ ಬಿತ್ತುವ ಕಾರ್ಯಕ್ರಮವಾಗಿದೆ. ಸರ್ಕಾರ ಇದನ್ನು ನಡೆಸಲು ಅವಕಾಶ ಕೊಡಬಾರದು ಹಾಗೂ ಮೌಢ್ಯ ಪ್ರತಿಬಂಧಕ ಕಾನೂನು ತರಲು ಹೊರಟಿರುವ ಸರ್ಕಾರ ಇದನ್ನು ನಿಷೇಧಿಸಲಿ ಎಂದು ಅವರು ಆಗ್ರಹಿಸಿದರು.
ವೇದಿಕೆ ಅಧ್ಯಕ್ಷ ಎ.ಗೋಪಾಲ್‌ಚಾರ್ ಮಾತನಾಡಿ, ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಏಳಿಗೆಗೆ ಶ್ರಮಿಸುವುದು ಹಾಗೂ ವಿಶ್ವಕರ್ಮ ಸಮಾಜದ ಕರಕುಶಲ ಕಲೆಗಳಾದ ಶಿಲ್ಪಕಲೆ, ಲೋಹದ ಕೆತ್ತನೆ ಮತ್ತಿತರ ಕಲೆಗಳಲ್ಲಿನ ವೃತ್ತಿನಿರತ ಕರ್ಮಿಗಳನ್ನು ಗುರುತಿಸಿ ಅವರ ಅಭಿವೃದ್ಧಿಗೆ ಕಾರ್ಯಕ್ರಮ ಹಮ್ಮಿಕೊಳ್ಳುವುದು ಸಂಘಟನೆ ಉದ್ದೇಶ ಎಂದರು. ವಿಶ್ವಕರ್ಮ ಸಮಾಜದ ಕೆ.ಆರ್. ನಗರದ ತಾಲೂಕು ಅಧ್ಯಕ್ಷ ಕೆ.ಎಸ್. ರೇವಣ್ಣ ಅಧ್ಯಕ್ಷತೆ ವಹಿಸಿದ್ದರು. ನಗರ ಪಾಲಿಕೆ ಸದಸ್ಯ ಎಂ. ರಮೇಶ್, ಮುಖಂಡರಾದ ಎನ್.ನಂದಕುಮಾರ್, ಹುಚ್ಚಪ್ಪಚಾರ್, ಕೆ.ಪಿ. ಕೃಷ್ಣಚಾರ್   ಮುಖ್ಯ ಅತಿಥಿಗಳಾಗಿದ್ದರು.
ವೇದಿಕೆ ಗೌರವಾಧ್ಯಕ್ಷ ಪುಟ್ಟಸ್ವಾಮಾಚಾರ್, ಉಪಾಧ್ಯಕ್ಷ ಎಸ್. ನರಸಿಂಹಮೂರ್ತಿ, ಖಜಾಂಚಿ ಬಸವರಾಜು ಹಾಗೂ ಸಂಘಟನಾ ಕಾರ್ಯದರ್ಶಿ ಎಸ್.ಕೆ. ಚಂದ್ರಶೇಖರ್ ಇದ್ದರು. ಪ್ರಧಾನ ಕಾರ್ಯದರ್ಶಿ ಎಲ್. ಸ್ವಾಮಿ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement