ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಖಾಸಗಿ ವಾಹನ ಚಾಲಕರಿಗೆ ಅಪಘಾತ ವಿಮಾ

Vishwanath S
Updated On : 10 Jan 2014, 12:54 pm

ಮೈಸೂರು: ರಾಜ್ಯ ಸರ್ಕಾರವು ಕಾರ್ಮಿಕ ಇಲಾಖೆಯು ಅಸಂಘಟಿತ ವಲಯದ ಖಾಸಗಿ ವಾಹನ ಚಾಲಕರ ಕಲ್ಯಾಣಕ್ಕಾಗಿ ಕರ್ನಾಟಕ ರಾಜ್ಯ ವಾಣಿಜ್ಯ ಖಾಸಗಿ ವಾಹನ ಚಾಲಕರ ಅಪಘಾತ ಪರಿಹಾರ ವಿಮಾ ಯೋಜನೆಯನ್ನು 2012-13ನೇ ಸಾಲಿನಲ್ಲಿ ಅನುಷ್ಠಾನಗೊಳಿಸಿದೆ.
ಈ ಯೋಜನೆಯಡಿ 20 ವರ್ಷದಿಂದ 70 ವರ್ಷದವರೆಗಿನ ಆಟೋ, ಟ್ಯಾಕ್ಸಿ , ಮ್ಯಾಕ್ಸಿಕ್ಯಾಬ್, ಲಾರಿ, ಬಸ್ ಹಾಗೂ ಖಾಸಗಿ ವಾಹನ ಚಾಲಕರು (ಬ್ಯಾಡ್ಜ್ ಹೊಂದಿದ ಚಾಲಕರು) ಈ ಯೋಜನೆಯಡಿ ಒಂದೇ ಬಾರಿ ನೋಂದಣಿ ಶುಲ್ಕ 25 ನೀಡಿ ಹಾಗೂ ಅರ್ಜಿ ಶುಲ್ಕ 1 ನೀಡಿ ನೋಂದಾಯಿಸಬೇಕು.
ನೋಂದಣಿಯಾದ ವಾಹನ ಚಾಲಕರಿಗೆ 2 ಲಕ್ಷದ  ಉಚಿತ ಅಪಘಾತ ವಿಮೆ ನೀಡಲಾಗುವುದು. ತಾತ್ಕಾಲಿಕ ಶಾಶ್ವತ  ನಿಷ್ಕ್ರಿಯತೆಗೆ ಪರಿಹಾರ ಸಹ ನೀಡಲಾಗುವುದು. ಚಾಲಕರ ನೋಂದಣಿ ಕಾರ್ಯವನ್ನು ಮೆ. ಮೈಸೂರು ಐ.ಟಿ ಸಲ್ಯೂಷನ್ಸ್ (ಪ್ರೈ) ಲಿ., ಕೆಎಸ್‌ಎಸ್‌ಐಡಿಸಿ, ಪ್ಲಾಟ್ ನಂ.55, ಹೆಬ್ಬಾಳ ಕೈಗಾರಿಕಾ ಕೇಂದ್ರ, ಮೈಸೂರು ಇವರಿಗೆ ನೀಡಿರುತ್ತದೆ.
ಜಿಲ್ಲಾ ವ್ಯಾಪ್ತಿಗೆ ಸಂಬಂಧಿಸಿದಂತೆ ಮೊದಲನೆ ಹಂತದಲ್ಲಿ 2012-13ನೇ ಸಾಲಿನಲ್ಲಿ ಒಟ್ಟು 8,287 ಚಾಲಕರು ಈ ಯೋಜನೆಯಡಿ ನೋಂದಣಿಗೊಂಡಿದ್ದಾರೆ. ಎರಡನೇ ಹಂತದ ಚಾಲಕರ ನೋಂದಣಿ ಕಾರ್ಯವನ್ನು ನಿರ್ವಹಿಸಲು ಮೆ. ಮೈಸೂರು ಐ.ಟಿ ಸಲ್ಯೂಷನ್ಸ್ (ಪ್ರೈ) ಲಿ. ಇವರಿಗೆ ನೀಡಲಾಗಿದ್ದು, 2014ರ ಜ. 6 ರಿಂದ ನೋಂದಣಿ ಕಾರ್ಯವು ಪುನರ್ ಆರಂಭಗೊಂಡಿರುತ್ತದೆ. ಮೆ. ಮೈಸೂರು ಐ.ಟಿ ಸಲ್ಯೂಷನ್ಸ್ (ಪ್ರೈ) ಲಿ. ಇವರು ನೋಂದಣಿ ಕಾರ್ಯವನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಕೆಐಒಎಸ್‌ಕೆ ಸೆಂಟರ್ ಅನ್ನು ಅಳವಡಿಸಲಾಗುವುದು ಹಾಗೂ ಕಾರ್ಮಿಕ ಅಧಿಕಾರಿಯ ಕಚೇರಿಯಲ್ಲಿಯೂ ಸಹ ನೋಂದಣಿ ಕಾರ್ಯ ನಿರ್ವಹಿಸಲು ವ್ಯವಸ್ಥೆ ಮಾಡಲಾಗಿದೆ. ಎಲ್ಲ ತಾ. ಕೇಂದ್ರಗಳಲ್ಲಿ ಚಾಲಕರ ನೋಂದಣಿ ಕಾರ್ಯವನ್ನು ನಿರ್ವಹಿಸುವ ಸಲುವಾಗಿ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ಕೆಐಒಎಸ್‌ಕೆ ಸೆಂಟರ್‌ನ್ನು ಅಳವಡಿಸಲಾಗುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement