ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಂಪನಿ ಬಿಟ್ಟು ಹೋದವರ ಬಗ್ಗೆ ಹೆಮ್ಮೆ ಇದೆ: ನಾರಾಯಣಮೂರ್ತಿ

Vishwanath S
Updated On : 11 Jan 2014, 1:00 am

ಕನ್ನಡಪ್ರಭ ವಾರ್ತೆ , ಮೈಸೂರು , ಜ.10
ಇಡೀ ವಿಶ್ವದಲ್ಲೇ ನಾಯಕತ್ವಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟ ಸಂಸ್ಥೆ ನಮ್ಮದು. ಇನ್ಫೋಸಿಸ್‌ನಲ್ಲಿ ಕೆಲಸ ಮಾಡಿ ಬಿಟ್ಟು ಹೋದವರ ಬಗೆಗೆ ನನಗೆ ಹೆಮ್ಮೆ ಇದೆ ಎಂದು ಇನ್ಫೋಸಿಸ್ ಸಂಸ್ಥಾಪಕ ಅಧ್ಯಕ್ಷ ಎನ್.ಆರ್. ನಾರಾಯಣಮೂರ್ತಿ ಸ್ಮರಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 'ಅವರು ಬಿಟ್ಟು ಹೋಗಿದ್ದಕ್ಕೆ ನನಗೆ ಬೇಸರವಿದೆ. ಆದರೆ, ಅವರ ಶ್ರಮವನ್ನು ನಾನು ಸ್ಮರಿಸುತ್ತೇನೆ. ಸಂಸ್ಥೆಯ ಬೆಳವಣಿಗೆಗೆ ಅವರು ಅವರದೇ ಆದ ಸೇವೆ ನೀಡಿದ್ದಾರೆ. ಸಂಸ್ಥೆಯನ್ನು ಮತ್ತಷ್ಟು ಬೆಳೆಸುವ ಸಲುವಾಗಿ ವಾಪಸ್ ಬಂದಿದ್ದೇನೆ. ನಾನು ಎಂದಿಗೂ ನಿವೃತ್ತಿಯಾಗುವುದಿಲ್ಲ. ಮಾಹಿತಿ ಕ್ಷೇತ್ರದಲ್ಲಿ ನಾವು ಸಾಧಿಸಬೇಕಾದದ್ದು ಸಾಕಷ್ಟಿದೆ. ಇದಕ್ಕಾಗಿ ಸಮೂಹ ಶ್ರಮದ ಅಗತ್ಯವಿದೆ. ಜತೆಗೆ ಶಿಕ್ಷಣ ತಜ್ಞರು, ವೃತ್ತಿಪರರ ಬೆಂಬಲ ಬೇಕಾಗಿದೆ' ಎಂದರು.
ತ್ರೈಮಾಸಿಕದಲ್ಲಿ ಇನ್ಫಿಗೆ ಶೇ. 19.4 ಲಾಭ: ಇದೇ ವೇಳೆ ಐಟಿ ದಿಗ್ಗಜ ಖ್ಯಾತಿಯ ಮೈಸೂರಿನ ಇನ್ಫೋಸಿಸ್ ಸಂಸ್ಥೆ ಪ್ರಸಕ್ತ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಶೇ.0.5 ರಷ್ಟು ಪ್ರಗತಿ ಸಾಧಿಸಿದ್ದು, ಶೇ.19.4 ಲಾಭ ಗಳಿಸಿದೆ. ಕಳೆದ ವರ್ಷದ ಸೆಪ್ಟೆಂಬರ್- ಡಿಸೆಂಬರ್‌ನಲ್ಲಿ 13,026 ಕೋಟಿ ಆದಾಯ ಗಳಿಸಿದ್ದು, ಅದರಲ್ಲಿ 2875 ಕೋಟಿ ನಿವ್ವಳ ಲಾಭ ದೊರಕಿದೆ. ಈ ಮೂಲಕ ಒಟ್ಟು ಲಾಭಾಂಶದಲ್ಲಿ ಶೇ.19.4 ರಷ್ಟು ಹೆಚ್ಚಳ ಕಂಡಿದೆ ಎಂದು ಸಿಇಒ ಹಾಗೂ ಎಂಡಿ ಎಸ್.ಡಿ. ಶಿಬುಲಾಲ್ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement