ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಗ್ರಾಮೀಣ ವಿದ್ಯಾರ್ಥಿಗಳಿಗೆ ಕೀಳರಿಮೆ ಬೇಡ: ಸಲಹೆ

Vishwanath S
Updated On : 11 Jan 2014, 2:04 am

ರಾವಂದೂರು: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳಷ್ಟೆ ಬೌದ್ಧಿಕವಾಗಿ ಸಮರ್ಥರು. ಈ ಬಗ್ಗೆ ಕೀಳರಿಮೆ ಬೇಡ ಎಂದು ರಾವಂದೂರು ಮುರುಘಾಮಠದ ಮೋಕ್ಷಪತಿ ಸ್ವಾಮೀಜಿ ಹೇಳಿದರು.
ಗ್ರಾಮದ ರಾಮಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಗ್ರಾಪಂ ಲೋಕ ಶಿಕ್ಷಣ ಕೇಂದ್ರ ಮತ್ತು ರೈಸ್ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರಿಗೆ ಏರ್ಪಡಿಸಿದ್ದ ಪರೀಕ್ಷಾ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸತತ ಪರಿಶ್ರಮ ಪಟ್ಟಾಗ ಮಾತ್ರ ಉತ್ತಮ ಅಂಕ ಲಭಿಸಲು ಸಾಧ್ಯ. ಅದನ್ನು ಬಿಟ್ಟು ಅದೃಷ್ಟವನ್ನು ನಂಬಿಕೊಂಡು ಪರೀಕ್ಷೆ ಎದುರಿಸಲು ಮುಂದಾಗಬಾರದು. ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಿದ್ದು, ಸೂಕ್ತ ಮಾರ್ಗದರ್ಶನದ ಕೊರತೆ ಇದೆ. ಇಂತಹ ಕಾರ್ಯಗಳು ಆ ಕೊರತೆ ನೀಗಿಸಬಲ್ಲವು ಎಂದು ತಿಳಿಸಿದರು.
ರೈಸ್ ಫೌಂಡೇಶನ್ ಮುಖ್ಯಸ್ಥ ಜಿ. ಅಚ್ಚುತ್‌ರಾವ್, ಉಪ ಪ್ರಾಂಶುಪಾಲ ಯೋಗೇಶ್ ಮಾತನಾಡಿದರು. ರಾವಂದೂರು, ಹಂಡಿತವಳ್ಳಿ, ದೊಡ್ಡಬೇಲಾಳು ಗ್ರಾಮದ 450ಕ್ಕೂ ಹೆಚ್ಚು ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗಹಿಸಿದ್ದರು. ಸಮಾರಂಭದಲ್ಲಿ ಶಿಕ್ಷಕರ ವತಿಯಿಂದ ರೈಸ್ ಫೌಂಡೇಶನ್ ಮುಖ್ಯಸ್ಥ ಜಿ. ಅಚ್ಯುತರಾವ್ ಅವರನ್ನು ಸನ್ಮಾನಿಸಲಾಯಿತು.
ಸಾಕ್ಷರ ಭಾರತ್ ಜಿಲ್ಲಾ ಸಂಯೋಜಕ ಎಂ. ಮಂಜುನಾಥ್, ತಾ. ಸಂಯೋಜಕ ಎಸ್.ಆರ್. ಅನಂತ್, ಕೃಷ್ಣ, ಪ್ರಕಾಶ್, ಶಿಕ್ಷಕರಾದ ಧರ್ಮಪಾಲ್, ಮಹದೇವಯ್ಯ, ಪಿ. ಮಹೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement