ತೆಂಗು ಬೆಳೆಗಾರರ ಸಂಘ ಅಸ್ತಿತ್ವಕ್ಕೆ: ರಂಗಯ್ಯ ಅಧ್ಯಕ್ಷ
ಹುಣಸೂರು: ತಾಲೂಕಿನಲ್ಲಿ ತೆಂಗು ಬೆಳೆಗಾರರ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಅಧ್ಯಕ್ಷರಾಗಿ ರಂಗಯ್ಯನಕೊಪ್ಪಲಿನ ಭರತ್‌ಕುಮಾರ್ ಹಾಗೂ ಹಳೇಬೀಡು ಲೋಕೇಶ್ ಖಜಾಂಚಿಯಾಗಿ ನೇಮಕವಾಗಿದ್ದಾರೆ.
ತಾಲೂಕಿನ ಬಿಳಿಕೆರೆ ಹೋಬಳಿ ಕುಪ್ಪೆ ಗ್ರಾಮದಲ್ಲಿ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಸೋಮಯ್ಯ, ಜಿಲ್ಲಾ ಕ್ಷೇತ್ರ ವಿಸ್ತರಣಾಧಿಕಾರಿ ಲತಾರಾಣಿ ಹಾಗೂ ಚನ್ನಪಟ್ಟಣ ತಾಲೂಕು ಕ್ಷೇತ್ರಾಧಿಕಾರಿ ನವೀನ್ ಅವರ ನೇತೃತ್ವದಲ್ಲಿ ಸೇರಿದ್ದ ಸಭೆಯಲ್ಲಿ ತಾಲೂಕಿನ ನೂರಾರು ತೆಂಗು ಬೆಳೆಗಾರರು ಪಾಲ್ಗೊಂಡಿದ್ದರು. ತೆಂಗು ಬೆಳೆಯ ಕುರಿತಾದ ಮಾಹಿತಿ, ಸಮಸ್ಯೆಗಳು ಹಾಗೂ ಅವುಗಳಿಗೆ ಪರಿಹಾರೋಪಾಯಗಳನ್ನು ಅಧಿಕಾರಿಗಳು ರೈತರಿಗೆ ತಿಳಿಸಿದರು.
ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಭರತ್‌ಕುಮಾರ್ ಮಾತನಾಡಿ, ಸಂಘಕ್ಕೆ ಸೇರ ಬಯಸುವ ರೈತರು 2013-14ನೇ ಸಾಲಿನ ಆರ್‌ಟಿಸಿ, ಎರಡು ಪಾಸ್‌ಪೋರ್ಟ್ ಭಾವಚಿತ್ರ ಹಾಗೂ ಐಡಿ ಕಾರ್ಡಿನ ನಕಲು ಪ್ರತಿ ನೀಡಬೇಕು. ಹೆಚ್ಚಿನ ಮಾಹಿತಿಗೆ ಮೊ. 9738852091 ಸಂಪರ್ಕಿಸಬಹುದು.