ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವಿಷ್ಣು ಟೆಕ್ಸ್‌ಟೈಲ್ಸ್ ಕಾರ್ಮಿಕರ ಧರಣಿ ಮುಂದುವರಿಕೆ

Vishwanath S
Updated On : 11 Jan 2014, 1:47 am

ಪಿರಿಯಾಪಟ್ಟಣ: ತಾಲೂಕಿನ ಕಂಪಲಾಪುರದ ವಿಷ್ಣು ಟೆಕ್ಸ್‌ಟೈಲ್ಸ್ ಮುಂಭಾಗ ಕಾರ್ಖಾನೆ ಕಾರ್ಮಿಕರು ಹಮ್ಮಿಕೊಂಡಿರುವ ಧರಣಿ ಎರಡನೆಯ ದಿನವಾದ ಶುಕ್ರವಾರವು ಮುಂದುವರಿದಿದೆ.
ಕಾರ್ಖಾನೆಯ ಮಾಲೀಕ ಯಾವುದೇ ಮುನ್ಸೂಚನೆ ನೀಡದೆ ಕಾರ್ಮಿಕ ಮುಖಂಡ ಸೇರಿದಂತೆ ಇತರೆ ಐವರು ಕಾರ್ಮಿಕರನ್ನು ಕಾರ್ಖಾನೆಯಿಂದ ಅಮಾನತುಪಡಿಸಿರುವುದನ್ನು ಖಂಡಿಸಿ, ಗುರುವಾರ ಬೆಳಗ್ಗೆಯಿಂದ ಸಿಐಟಿಯು ಕಾರ್ಯಕರ್ತರು ಹಾಗೂ ಕರವೇ ಕಾರ್ಯಕರ್ತರು ಪ್ರಾರಂಭಿಸಿರುವ ಧರಣಿಯು ಮುಂದುವರಿದಿದೆ.
ಧರಣಿ ನಿರತ ಕಾರ್ಮಿಕರು ತಮಗೆ ನ್ಯಾಯ ಸಿಗುವವರೆಗೂ ಧರಣಿಯಿಂದ ಹಿಂದಿರುಗುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದು, ಸ್ಥಳದಲ್ಲಿಯೇ ಅಡಿಗೆ ಮಾಡಿ ಊಟ ಮಾಡುವ ಮೂಲಕ ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ಕಾರ್ಖಾನೆಯ ಮುಂಭಾಗ ಧರಣಿ ನಡೆಯುತ್ತಿದ್ದರೆ ಕಾರ್ಖಾನೆಯಲ್ಲಿ ಮಾಲೀಕರಾಗಲಿ ಅಥವಾ ಆಡಳಿತ ಮಂಡಳಿಯ ಸದಸ್ಯರಾಗಲಿ ಯಾರೂ ಇಲ್ಲ. ಕಾರ್ಖಾನೆಗೆ ಬೀಗ ಹಾಕಲಾಗಿದ್ದು, ಇಬ್ಬರು ಭದ್ರತಾ ಸಿಬ್ಬಂದಿ ಮಾತ್ರ ಕಾವಲು ಕಾಯುತ್ತಿದ್ದಾರೆ. ಧರಣಿಗೆ ಬೆಂಬಲ ವ್ಯಕ್ತಪಡಿಸಿ 2ನೇ ದಿನವೂ ಧರಣಿಯಲ್ಲಿ ಪಾಲ್ಗೊಂಡಿರುವ ಕರವೇ ಅಧ್ಯಕ್ಷ ಎನ್.ಎಲ್. ಗಿರೀಶ್ ಹಾಗೂ ಕಾರ್ಯಕರ್ತರು ಕಾರ್ಮಿಕರಿಗೆ ನ್ಯಾಯ ಸಿಗುವತನಕ ತಾವು ಧರಣಿಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement