ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅಂತರಸಂತೆ ಗ್ರಾಮಸಭೆ ಮುಂದಿಟ್ಟ ಮಕ್ಕಳ ಸಮಸ್ಯೆಗಳ ಕಂತೆ

Vishwanath S
Updated On : 12 Jan 2014, 1:20 am

ಅಂತರಸಂತೆ: ಎಚ್.ಡಿ. ಕೋಟೆ ತಾಲೂಕು ಅಂತರಸಂತೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತರಸಂತೆ ಗ್ರಾಪಂ ಹಾಗೂ ಜೀವಿಕ ಸಂಘಟನೆ (ಜೀತ ವಿಮುಕ್ತಿ ಕರ್ನಾಟಕ) ಅವರ ಸಹಯೋಗದೊಂದಿಗೆ ಗ್ರಾಮಸಭೆ ಏರ್ಪಡಿಸಲಾಗಿತ್ತು. ಅಂತರಸಂತೆ ಗ್ರಾಪಂ ವ್ಯಾಪ್ತಿಯ ಗ್ರಾಮಗಳಾದ ಅಂತರಸಂತೆ, ಸೋಗಹಳ್ಳಿ, ಹೊಸಮಾಳ, ನಿಸನ, ಹೊಸಹೊಳಲು ಹಾಗೂ ಹುಣಸೇಕುಪ್ಪೆ ಗ್ರಾಮಗಳ ಶಾಲಾ ಮಕ್ಕಳು ಹಾಗೂ ಆ ಶಾಲೆಗಳ ಮುಖ್ಯ ಶಿಕ್ಷಕರು ಭಾಗವಹಿಸಿದ್ದರು. 7ನೇ ತರಗತಿ ವಿದ್ಯಾರ್ಥಿ ಅಫ್ರಿದ್ ಅಧ್ಯಕ್ಷರಾಗಿ ಹಾಗೂ ಕುಮಾರಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿ ಸಭೆಗೆ ಚಾಲನೆ ನೀಡಿದರು. ಹೊಸಹೊಳಲು ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 3 ಕಂಪ್ಯೂಟರ್ ಇದ್ದು ಉಪಯೋಗಿಸಲು ವಿದ್ಯುತ್ ಇಲ್ಲ. ಹುಣಸೇಕುಪ್ಪೆ ಗ್ರಾಮದ ಶಾಲೆಯಲ್ಲಿ ಕೊಠಡಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ.  ಲೋಟಗಳು ಇಲ್ಲ. ಸೋಗಹಳ್ಳಿ ಶಾಲೆಯಲ್ಲಿ ಕುಡಿಯುವ ನೀರು ಹಾಗೂ ಅಂತರಸಂತೆ ಶಾಲೆಯಲ್ಲಿ ಸ್ವಚ್ಛವಾದ ಕುಡಿಯುವ ನೀರು ಮತ್ತು ಶಾಲಾ ಕೊಠಡಿಗಳ ರಿಪೇರಿ ಮತ್ತು ಮಕ್ಕಳಿಗೆ ಊಟದ ತಟ್ಟೆಗಳು ಹೊಸಮಾಳ ಗ್ರಾಮದ ಶಾಲೆಯಲ್ಲಿ ಕುಡಿವ ನೀರು, ಬೆಂಚುಗಳು ಬೇಕಾಗಿದ್ದು, ಇವುಗಳನ್ನು ಸರ್ಕಾರದಿಂದ ಅಥವಾ ದಾನಿಗಳಿಂದ ಇಲ್ಲಿನ ಗ್ರಾಪಂನಿಂದ ಒದಗಿಸಿಕೊಡಲು ಕೇಳಿಕೊಳ್ಳಲು ಶಾಲೆಗಳ ಮಂತ್ರಿಮಂಡಲದ ಸದಸ್ಯರು ಕೋರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement