ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮೈಸೂರು- ಬೆಂಗಳೂರು ವಿಮಾನಸೇವೆ ಅಗತ್ಯ

Vishwanath S
Updated On : 13 Jan 2014, 1:02 am

ಮೈಸೂರು: ದೇಶದಲ್ಲಿ ಮೈಸೂರು ಪ್ರವಾಸೋದ್ಯಮದಲ್ಲಿ ಹೆಚ್ಚಿನ ಮಹತ್ವ ಪಡೆಯುತ್ತಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಿದ್ದಾರ್ಥ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಉದ್ಯಮಿ ಪಿ.ವಿ.ಗಿರಿ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ 2014ನೇ ಸಾಲಿನ ಡೈರಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಬೆಂಗಳೂರು- ಮೈಸೂರು ರಸ್ತೆಯ ಅವ್ಯವಸ್ಥೆ ಬಗ್ಗೆ ಹಲವು ಪ್ರವಾಸಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ಸರಿಪಡಿಸಬೇಕು. ಪ್ರಸ್ತುತ ಮೈಸೂರು- ಚೆನ್ನೈ ನಡುವೆ ವಿಮಾನಯಾನ ಇದೆ. ಎಲ್ಲರ ಅನುಕೂಲಕ್ಕಾಗಿ ಮೈಸೂರು- ಬೆಂಗಳೂರು ನಡುವೆಯೂ ವಿಮಾನಯಾನ ಆರಂಭಿಸಬೇಕು ಎಂದು ಅವರು ಆಗ್ರಹಿಸಿದರು.
ಮುಖ್ಯ ಅತಿಥಿಯಾಗಿದ್ದ ಮೈಸೂರು ವಿವಿ ಕುಲಪತಿ ಪ್ರೊ. ಕೆ.ಎಸ್.ರಂಗಪ್ಪ ಮಾತನಾಡಿ, ಹಲವು ವಿಚಾರ ಮತ್ತು ವ್ಯಕ್ತಿಗಳಿಂದ ಮೈಸೂರು ಹೆಸರುವಾಸಿಯಾಗಿದೆ. ಅದೇ ರೀತಿ ಮೈಸೂರಿನ ಪತ್ರಕರ್ತರು ಸಹ ಹೆಸರುವಾಸಿಯಾಗಬೇಕೆಂಬುದು ನನ್ನ ಆಶಯ ಎಂದರು.
ಒಳ್ಳೆಯ ವಿಚಾರಗಳಲ್ಲಿ ಪತ್ರಕರ್ತರು ಧೈರ್ಯವಾಗಿ ಬರೆಯಬೇಕು. ಯಾರೊಬ್ಬರ ಮರ್ಜಿಗೆ ಒಳಗಾಗಿ ಸುದ್ದಿ ಬರೆಯಬಾರದು. ಮೈಸೂರು ವಿವಿಯಲ್ಲಿ ತಪ್ಪುಗಳನ್ನು ತೋರಿಸಿದರೆ ತಿದ್ದಿಕೊಳ್ಳುವ ಯತ್ನ ಮಾಡುವುದಾಗಿ ಹೇಳಿದರು.
ವಿಧಾನಪರಿಷತ್ ಸದಸ್ಯ ಸಿದ್ದರಾಜು ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು. ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಕೆ.ದೀಪಕ್, ಉಪಾಧ್ಯಕ್ಷರಾದ ಪ್ರಗತಿ ಗೋಪಾಲಕೃಷ್ಣ, ಭೇರ್ಯ ಮಹೇಶ್ ಇದ್ದರು. ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ ನಿರೂಪಿಸಿದರು. ಮತ್ತೊಬ್ಬ ಕಾರ್ಯದರ್ಶಿ ಕುಪ್ಪೆ ಮಹದೇವಸ್ವಾಮಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement