ಶೌರ್ಯ ಪ್ರಶಸ್ತಿ ವಿಜೇತ ಮನೋಜ್‌ಗೆ ಬೀಳ್ಕೊಡುಗೆ
ಕೆ.ಆರ್. ನಗರ: ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಸೀಕರಿಸಲು ದೆಹಲಿಗೆ ತೆರಳುತ್ತಿರುವ ತಾಲೂಕಿನ ಸಾಲಿಗ್ರಾಮದ ಎಸ್.ಟಿ.ರಾಜಶೇಖರ್ ಮತ್ತು ಎಸ್.ಕೆ.ಆರತಿ ಅವರ ಪುತ್ರ ಎಸ್.ಎಸ್.ಮನೋಜ್ ಅವರನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬೀಳ್ಕೊಡಲಾಯಿತು.
ಎಪಿಎಂಸಿ ಉಪಾಧ್ಯಕ್ಷ ಜಿ.ಕೆ.ತೋಟಪ್ಪನಾಯಕ, ಸಾ.ರಾ. ಸ್ನೇಹ ಬಳಗದ ವ್ಯವಸ್ಥಾಪಕ ಕಲ್ಲಳ್ಳಿ ಬಾಬು, ತಾಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳು ಮನೋಜ್‌ಗೆ ಶುಭ ಹಾರೈಸಿದರು.
ಶ್ರೀರಂಗಪಟ್ಟಣ ಬಳಿ ಕಾವೇರಿ ನದಿಗೆ ಜಾರಿ ಬಿದ್ದು ಮುಳುಗಿ ಸಾವಿನಂಚಿನಲ್ಲಿದ್ದ ಅಂಗವಿಕಲ ಮಹಿಳೆಯನ್ನು 2012ರ ಸೆ.2ರಂದು ಮನೋಜ್ ಜೀವದ ಹಂಗು ತೊರೆದು ರಕ್ಷಿಸಿದ್ದ. ಇದನ್ನು ಪರಿಗಣಿಸಿ ಭಾರತ ಸರ್ಕಾರ ಈ ಅತ್ಯುನ್ನತ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಜ.26ರಂದು ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಬಾಲಕನಿಗೆ ಶೌರ್ಯ ಪ್ರಶಸ್ತಿ ಪ್ರದಾನ ಮಾಡುವರು.