ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

18, 19ಕ್ಕೆ ಪಂಚಾಕ್ಷರಿ ಗವಾಯಿ ಪುಣ್ಯಸ್ಮರಣೆ

Vishwanath S
Updated On : 15 Jan 2014, 1:14 am

ಮೈಸೂರು: ಸರಸ್ವತಿಪುರಂನ ಸಪ್ತಸ್ವರ ಬಳಗ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಸಂಯುಕ್ತಾಶ್ರಯದಲ್ಲಿ ಜ.18 ಮತ್ತು 19 ರಂದು ಜಗನ್ಮೋಹನ ಅರಮನೆಯಲ್ಲಿ ಗಾನಯೋಗಿ ಶ್ರೀ ಪಂಚಾಕ್ಷರಿ ಗವಾಯಿಗಳವರ ಪುಣ್ಯಸ್ಮರಣೆಯ ಯುವ ಸಂಗೀತೋತ್ಸವ ನಡೆಯಲಿದೆ.
ಜ.18ರ ಸಂಜೆ 5ಕ್ಕೆ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯ ಪ್ರಭಾರ ಕುಲಪತಿ ಡಾ.ಎಂ. ಬಸವ್ಣ ಸಂಗೀತೋತ್ಸವ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ನಿರ್ಮಲ ಮಠಪತಿ ಭಾಗವಹಿಸುವರು. ನಂತರ ಮುಂಬಯಿಯ ಸೌಮ್ಯ ಉಳ್ಳಾಲ್, ಬೆಂಗಳೂರಿನ ಪಂ. ರವೀಂದ್ರ ಸೋರಗಾಂವಿ ಹಿಂದುಸ್ತಾನಿ ಗಾಯನ ಪ್ರಸ್ತುತಪಡಿಸುವರು.
ಜ.19ರ ಬೆಳಗ್ಗೆ 10.30ಕ್ಕೆ ಗದಗದ ನಾಗಪ್ಪ ಆರ್. ಶಿರೋಳ ಅವರಿಂದ ಗಾಯನ, ಬೆಂಗಳೂರಿನ ಸಿಂಧು ಸುಚೇತನ್ ಹಾಗೂ ಎಚ್.ಎಂ. ಸ್ಮಿತಾ ಅವರಿಂದ ಕರ್ನಾಟಕ ಶೈಲಿಯ ಪಿಟೀಲು ದ್ವಂದ್ವವಾದನ, ಗುಲ್ಬರ್ಗದ ಬಸವರಾಜ ಬಂಟನೂರ ಅವರಿಂದ ಗಾಯನ ಕಾರ್ಯಕ್ರಮ ನಡೆಯಲಿದೆ.
ಸಂಜೆ 5ಕ್ಕೆ ಬೆಂಗಳೂರಿನ ಪ್ರಿಯ ಪುರುಷೋತ್ತಮನ್ ಅವರಿಂದ ಗಾಯನ, ಮೈಸೂರಿನ ಎಸ್. ಅಶ್ವಿನ್ ಮತ್ತು ಸಿ. ಪ್ರಣವ್ ಹುನಗುಂದ ತಂಡದಿಂದ ಪಾಶ್ಚಾತ್ಯ ಸಂಗೀತ ಪ್ರಸ್ತುತಿ. ಸುಧಾಂಶು ಕುಲಕರ್ಣಿ ಮತ್ತು ತಂಡ ವಿಶಿಷ್ಟ ಹಾರ್ಮೋನಿಯಂ ಸೋಲೋ ನೀಡುವರು. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement