ನಾರಾಯಣ ಗುರು ಯೋಗವುಂದಿರಕ್ಕೆ 7 ಪ್ರಶಸ್ತಿ
ಮೈಸೂರು: ಮಂಡ್ಯದಲ್ಲಿ ಸ್ವಾಮಿ ವಿವೇಕಾನಂದ ಕನ್ನಡ ಯುವ ಯೋಗ ಬಳಗ ನಡೆಸಿದ ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ಕುವೆಂಪುನಗರದ ಬ್ರಹ್ಮಶ್ರೀ ನಾರಾಯಣಗುರು ಯೋಗ ಮಂದಿರದ 7 ಯೋಗಪಟುಗಳು ಪ್ರಶಸ್ತಿ ಪಡೆದಿದ್ದಾರೆ.
8 ರಿಂದ 10 ವರ್ಷದ ವಿಭಾಗದಲ್ಲಿ ಕುಮಾರಸ್ವಾಮಿ (ತೃತೀಯ ಬಹುಮಾನ), 11 ರಿಂದ 14 ವರ್ಷದ ಬಾಲಕರ ವಿಭಾಗದಲ್ಲಿ ಎಂ. ಮಧುಸೂದನ್ (4ನೇ), ಎಸ್. ಪುರುಷೋತ್ತಮ್ (5ನೇ), ಇದೇ ವಯೋವುತಿಯ ಬಾಲಕಿಯರ ವಿಭಾಗದಲ್ಲಿ ಎಂ. ದಿವ್ಯ (4ನೇ), 15ರಿಂದ 18 ವಯೋವುತಿಯ ಬಾಲಕಿಯರ ವಿಭಾಗದಲ್ಲಿ ಪಿ. ಇಂಚರ (ಪ್ರಥಮ), 26 ರಿಂದ 35 ವಯೋವುತಿಯ ಮಹಿಳೆಯರ ವಿಭಾಗದಲ್ಲಿ ವಿ.ಲಕ್ಷ್ಮಿ (ಪ್ರಥಮ), 46 ರಿಂದ 55 ವಯೋವುತಿಯ ಮಹಿಳೆಯರ ವಿಭಾಗದಲ್ಲಿ ಎಸ್.ರತ್ನವತಿ (ಪ್ರಥಮ) ಬಹುಮಾನ ಗಳಿಸಿದ್ದಾರೆ. ವಿಜೇತರನ್ನು ಯೋಗಾಚಾರ್ಯ ಬಿ.ಶಾಂತರಾಮ್ ಹಾಗೂ ಕಾರ್ಯದರ್ಶಿ ಜೆ. ವಿನಯ ಅಭಿನಂದಿಸಿದ್ದಾರೆ.
ಡಾ.ವಿಷ್ಣುವರ್ಧನ್ ಪುತ್ಥಳಿ ಸ್ಥಾಪನೆಗೆ ಆಗ್ರಹ
ಮೈಸೂರು: ಮೈಸೂರಿನವರೇ ಆದ ಡಾ.ವಿಷ್ಣುವರ್ಧನ್ ಅವರ ನೆನಪಿಗಾಗಿ ಪುತ್ಥಳಿ ಸ್ಥಾಪಿಸುವಂತೆ ಮೈಸೂರು ನಗರ ಮತ್ತು ಜಿಲ್ಲಾ ವಿಷ್ಣುವರ್ಧನ್ ಅಭಿಮಾನಿಗಳ ಒಕ್ಕೂಟ ಸರ್ಕಾರವನ್ನು ಆಗ್ರಹಿಸಿದೆ. ಕನ್ನಡ ಚಿತ್ರರಂಗದಲ್ಲಿ 200 ಚಿತ್ರಗಳಲ್ಲಿ ನಟಿಸಿ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪಡೆದು ಮೇರು ನಟರಾಗಿ ಬೆಳೆದಿದ್ದರು. ಇಡೀ ಭಾರತದ ಚಿತ್ರರಂಗ ನಮ್ಮ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಮಾಡಿದರು. ಅಂತಹವರ ಪುತ್ಥಳಿಯನ್ನು ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಇರುವ ವಿಷ್ಣುವರ್ಧನ್ ಉದ್ಯಾನದಲ್ಲಿ ಸ್ಥಾಪಿಸಬೇಕು. ಈಗ ಮುಖ್ಯಮಂತ್ರಿಗಳು ಮೈಸೂರಿನವರೇ ಆಗಿರುವುದರಿಂದ ಆದಷ್ಟು ಬೇಗ ಪುತ್ಥಳಿ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.
ಮೂವರಿಗೆ ಡಾಕ್ಟರೇಟ್
ಮೈಸೂರು: ಡಾ.ಎಸ್. ವೆಂಕಟೇಶ್ ಅವರ ಮಾರ್ಗದರ್ಶದಲ್ಲಿ ಸಂಶೋಧನೆ ನಡೆಸಿದ ಎಚ್.ಎಂ. ಮಲ್ಲಿಕಾರ್ಜುನ ಸ್ವಾಮಿ ಅವರು ಸಾದರಪಡಿಸಿದ ಮಹಾಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿ ತತ್ವಜ್ಞಾನ ವಿಷಯಕ್ಕೆ, ಡಾ. ಸಿ. ಉಷಾರಾವ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಸಿ.ಮಾದೇಗೌಡ ಅವರು ಸಾದರಪಡಿಸಿದ ಮಹಾಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿ ಸಮಾಜ ಸೇವೆ ವಿಷಯಕ್ಕೆ ಹಾಗೂ ಡಾ.ಕೆ.ಎಸ್. ರಾಜಶೇಖರ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಆರ್. ಮನು ಅವರು ಸಾದರಪಡಿಸಿದ ಮಹಾಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿ ಅರ್ಥಶಾಸ್ತ್ರ ವಿಷಯಕ್ಕೆ ಪಿಎಚ್.ಡಿ ಪದವಿ ನೀಡಿದೆ. ಮನು ಅವರು ಜೆಎಸ್ಎಸ್ ಮಹಿಳಾ ಕಾಲೇಜಿನ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿಯಾಗಿದ್ದರು.
ಗಣರಾಜ್ಯೋತ್ಸವ ಪೆರೇಡ್ಗೆ ಆಯ್ಕೆ
ಮೈಸೂರು: ದೆಹಲಿಯಲ್ಲಿ ಜ.26 ರಂದು ನಡೆಯುವ ರಾಷ್ಟ್ರೀಯ ಗಣರಾಜ್ಯೋತ್ಸವದ ಪೆರೇಡ್ನಲ್ಲಿ ಭಾಗವಹಿಸಲು ನಗರದ ಮರಿಮಲ್ಲಪ್ಪ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಪ್ರಹ್ಲಾದ್ ಪಿ. ಭಟ್ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಆರ್. ಭೂಮಿಕಾ ಆಯ್ಕೆಯಾಗಿದ್ದಾರೆ.
ರಾಹುಲ್ ಪ್ರಧಾನಿ: ಕಾಂಗ್ರೆಸ್ ನಿರ್ಣಯ
ಮೈಸೂರು: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ಗಾಂಧಿ ಅವರನ್ನು ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಬೇಕೆಂದು ನಗರದಲ್ಲಿ ಕಾಂಗ್ರೆಸ್ ಅಧ್ಯಕ್ಷ ಸಿ.ದಾಸೇಗೌಡ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಣಯವನ್ನು ಸರ್ವಾನುಮತದ ಒಪ್ಪಿಗೆಯೊಂದಿಗೆ ಅಂಗೀಕರಿಸಲಾಗಿದೆ. ಈ ನಿರ್ಣಯದ ಅನುಷ್ಠಾನಕ್ಕಾಗಿ ಪ್ರದೇಶ ಕಾಂಗ್ರೆಸ್ ಸಮಿತಿ ಮುಖಾಂತರ ಅಖಿಲ ಭಾರತ ಕಾಂಗ್ರೆಸ್ ಸಮಿತಿಗೆ ಕಳುಹಿಸಲಾಗಿದೆ.
ನೇಮಕ
ಸಮಾಜವಾದಿ ಜನತಾ ಪಾರ್ಟಿಯ ನಗರ ಘಟಕದ ಅಧ್ಯಕ್ಷರನ್ನಾಗಿ ರಾಜೀವ್ನಗರದ ನಿವಾಸಿ ಮುಜಾಹಿದ್ ಅಹಮದ್ ಸಿದ್ದಕಿ ಅವರನ್ನು ನೇಮಕ ಮಾಡಲಾಗಿದೆ.
ಕೃತಿ ಬಿಡುಗಡೆ
ಕನ್ನಡ ವೈದ್ಯ ಸಾಹಿತ್ಯ ಪರಿಷತ್ ಮತ್ತು ಕೌಸ್ತುಭ ಕನ್ನಡ ಮಾಸ ಪತ್ರಿಕೆಯು ಜೆಎಲ್ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಶ್ರೀಕಾಂತರ ಕೀಚಕರು- ರಂಗರೂಪ- ನಾಗಚಂದ್ರ ಕೃತಿ ಬಿಡುಗಡೆ ಸಮಾರಂಭವನ್ನು ಜ.16ರ ಬೆಳಗ್ಗೆ 10.30ಕ್ಕೆ ಆಯೋಜಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಕಾರ್ಯಕ್ರಮ ಉದ್ಘಾಟಿಸುವರು. ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಕೃತಿ ಬಿಡುಗಡೆಗೊಳಿಸುವರು. ಶಾಸಕ ವಾಸು ಅಧ್ಯಕ್ಷತೆ ವಹಿಸುವರು. ರಂಗಕರ್ಮಿ ಎನ್. ಧನಂಜಯ ಕೃತಿ ಕುರಿತು ಮಾತನಾಡುವರು. ಡಾ.ಸಿ. ಶರತ್ಕುಮಾರ್ ಭಾಗವಹಿಸುವರು.
ಸ್ವರ್ಣ ಪ್ರಾಶನ
ಗೋಕುಲಂನ ಆಯುರ್ ವೇದಾಂತ ಸಂಸ್ಥೆಯು ಜ.16 ರಂದು ಬೆಳಗ್ಗೆ 8 ರಿಂದ ಸಂಜೆ 6 ರವರೆಗೆ ಸ್ವರ್ಣ ಪ್ರಾಶನ ಅಭಿಯಾನ ಆಯೋಜಿಸಿದೆ. ಆಸಕ್ತರು ಮೊ. 9972031341 ಸಂಪರ್ಕಿಸಬಹುದು.
ಕಿರುಚಿತ್ರ ಪ್ರಸಾರ
ಸಿ.ಆರ್. ಕ್ರಿಯೇಷನ್ಸ್ ನಿರ್ಮಿಸಿರುವ ಸಿ.ರಾಕೇಶ್ ನಿರ್ದೇಶನದ ಕೊಡುತಾಯಿ ಜನ್ಮವನು ಎಂಬ 3ನೇ ಕಿರುಚಿತ್ರ ಜ.16ರ ಸಂಜೆ 6.30ಕ್ಕೆ 4ಎಂ ಮತ್ತು ಟಿವಿ21 ಎಂಬ ಖಾಸಗಿ ಚಾನೆಲ್ನಲ್ಲಿ ಪ್ರಸಾರವಾಗಲಿದೆ. ಕೌಟುಂಬಿಕ ಸಂದೇಶ ನೀಡಲಿದೆ
ವಾಹನ ಚಾಲನಾ ತರಬೇತಿ
ಕೆ.ಆರ್. ನಗರ: ತಾಲೂಕು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 2013-14ನೇ ಸಾಲಿಗೆ ಪ.ಜಾತಿ ನಿರುದ್ಯೋಗಿ ಯುವಕ, ಯುವತಿಯರಿಂದ ಲಘುವಾಹನ ಮತ್ತು ಭಾರಿ ವಾಹನ ಚಾಲನಾ ತರಬೇತಿ ನೀಡಲು ನಿಗದಿತ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ನಮೂನೆಯು ಇಲಾಖೆಯ ಕಚೇರಿಯಲ್ಲಿ ಲಭ್ಯವಿದ್ದು, ಕಚೇರಿ ವೇಳೆಯಲ್ಲಿ ಪಡೆದು ಪೂರ್ಣ ಮಾಹಿತಿಯನ್ನು ತುಂಬಿ ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಲು ಸೂಚಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಜ.20ರಂದು ಕಡೆಯ ದಿನ. ನಂತರ ಬರುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
ನಾಲೆ ಹೂಳು ತೆಗೆಯಲು ಆಗ್ರಹ
ಸುತ್ತೂರು: ನಂಜನಗೂಡು ತಾಲೂಕು ಹಾಗೂ ಟಿ.ನರಸೀಪುರ ತಾಲೂಕುಗಳಿಗೆ ಸೇರಿದ ರೈತರ ಜಮೀನುಗಳಿಗೆ ನೀರು ಒದಗಿಸುವ ಹುಲ್ಲಹಳ್ಳಿ ನಾಲೆಗೆ ನೀರು ಹರಿಸುವಂತೆ ಆ ಭಾಗದ ರೈತರು ಸರ್ಕಾರವನ್ನು ಆಗ್ರಹಿಸಿದ್ದಾರೆ. ಹುಲ್ಲಹಳ್ಳಿ ನಾಲೆಯಲ್ಲಿ ಸುಮಾರು ವರ್ಷದಿಂದ ಹೂಳು ತುಂಬಿದ್ದು, ರೈತರ ಗದ್ದೆಗಳಿಗೆ ಸಮರ್ಪಕವಾಗಿ ನೀರು ಹರಿಯುತ್ತಿಲ್ಲ. ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ನಾಲೆ ದುರಸ್ತಿಗೆ 25 ಕೋಟಿ ಮಂಜೂರಾದರೂ ಕಾಮಗಾರಿ ಆರಂಭವಾಗಲಿಲ್ಲ. ಈಗ ಕಬಿನಿ ಕಟ್ಟೆಯಲ್ಲಿ ಸಾಕಾಗುವಷ್ಟು ನೀರು ತುಂಬಿದ್ದು, ನಾಲೆಗೆ ನೀರು ಬಿಡುವಂತೆ ರೈತರು ಒತ್ತಾಯಿಸಿದ್ದಾರೆ.
17 ರಂದು ಉಪ್ಪಾರ ಯುವಕರ ಸಭೆ
ಸಾಲಿಗ್ರಾಮ: ಕೆ.ಆರ್. ನಗರ ತಾಲೂಕಿನ ಉಪ್ಪಾರ ಜನಾಂಗದ ಯುವಕರ ಸಭೆಯನ್ನು ಜ.17ರ ಬೆಳಗ್ಗೆ 11ಕ್ಕೆ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಏರ್ಪಡಿಸಲಾಗಿದೆ. ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಪುರಿ ಮಹಾಸ್ವಾಮಿಗಳ ನೇತೃತ್ವದಲ್ಲಿ ಉಪ್ಪಾರ ಸಮಾಜದ ಯುವಜನತೆಯನ್ನು ಸಂಘಟಿಸಲಾಗುತ್ತಿದ್ದು. ಅದೇ ಮಾದರಿಯಲ್ಲಿ ಕೆ.ಆರ್. ನಗರ ತಾಲೂಕಿನಲ್ಲೂ ಯುವಕರನ್ನು ಸಂಘಟಿಸುವ ಸಲುವಾಗಿ ಈ ಸಭೆ ಏರ್ಪಡಿಸಲಾಗಿದೆ ಎಂದು ಮುಖಂಡ ಮುದುಗುಪ್ಪೆ ಕುಮಾರ್ ತಿಳಿಸಿದ್ದಾರೆ. ಮೊ. 94830 85776 ಸಂಪರ್ಕಿಸಬಹುದು.